ಕೊಡಗಿನ ಕಲಿ ಕಿಕ್ ಗೆ ಟುಸ್ ಆದ ಚೆನ್ನೈ

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಅವಕಾಶ ಗಿಟ್ಟಿಸಿಕೊಂಡ ಬೆಂಗಳೂರು ತಂಡದ ಆರಂಭ ಕಾಣಲಿಲ್ಲ. ಸತತ ನಾಲ್ಕು ಪಂದ್ಯಗಳಲ್ಲಿ ಅಜೆಯರಾಗಿ ಉಳಿದಿದ್ದ ಜಾಕ್ವಾಸ್ ಕಾಲಿಸ್ (19) ಮೊದಲ ಬಾರಿಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಭರವಸೆಯ ಆಟಗಾರ ಮನೀಷ್ ಪಾಂಡೆ (20) ಉತ್ತಮ ಆರಂಭ ಪಡೆದರೂ ಹೆಚ್ಚು ಹೊತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ದ್ವಿತೀಯ ಕ್ರಮಾಂಕಕ್ಕೆ ಭಡ್ತಿ ಪಡೆದು ಬಂದ ರಾಹುಲ್ ದ್ರಾವಿಡ್ (14) ಕೂಡಾ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಚೆಲ್ಲಿದರು.
ಆದರೆ , ನಂತರ ಬಂದ ರಾಬಿನ್ ಉತ್ತಪ್ಪ ಎರಡು ಬಾರಿ ಸಿಕ್ಕಿದ ಅಮೂಲ್ಯ ಜೀವದಾನ ಸಿಕ್ಕಿದ ಲಾಭ ಪಡೆದು ಮೈದಾನದಲ್ಲಿ ಸಿಕ್ಸರುಗಳ ಮೇಲೆ ಸಿಕ್ಸರ್ ಸಿಡಿಸಿದರು. ಉತ್ತಪ್ಪ 5 ಹಾಗೂ 25 ರನ್ ಗಳಿಸಿದ್ದಾಗ ಆರ್. ಅಶ್ವಿನ್ ಹಾಗೂ ಮುರಳಿ ವಿಜಯ್ ಕ್ಯಾಚ್ ಕೈಚೆಲ್ಲಿದ್ದರು.ರಾಬಿನ್ ಉತ್ತಪ್ಪ ಬಾರಿಸಿದ ಬಿರುಸಿನ ಅರ್ಧಶತಕ (ಅಜೇಯ 68, 38ಎಸೆತ ,6 ಸಿಕ್ಸರ್, 3 ಬೌಂಡರಿ) . ಬೌಷರ್ (ಅಜೇಯ 11 ರನ್ ) ಜೊತೆ ಸೇರಿ ಉತ್ತಪ್ಪ ಆರನೇ ವಿಕೆಟ್‌ಗೆ ಕೇವಲ 19 ಎಸೆತಗಳಲ್ಲಿ ಮುರಿಯದ 52 ರನ್ ಒಟ್ಟು ಸೇರಿಸಿದ್ದು ನಿಗದಿತ 20 ಓವರುಗಳಲ್ಲಿ 171 ರನ್ನುಗಳ ಸವಾಲಿನ ಮೊತ್ತವನ್ನು ಪೇರಿಸಲು ಸಾಧ್ಯವಾಯಿತು.
ವಿರಾಟ್ ಕೊಹ್ಲಿ ಕೂಡ 24 ರನ್ ಗಳಿಸಿ ತಂಡದ ಮೊತ್ತಕ್ಕೆ ಉತ್ತಮ ಕೊಡೂಗೆ ನೀಡಿದರು.
ಆರ್ ಸಿಬಿ ಮೊತ್ತ ಬೆನ್ನಟ್ಟಿದ ಚೆನ್ನೈಸೂಪರ್ ಕಿಂಗ್ಸ್ ಆರಂಭದಿಂದಲೂ ಒತ್ತಡಕ್ಕೊಳಗಾಗಿ ಆಡಿತು. ಆರಂಭಿಕ ಆಟಗಾರ ಪಾರ್ಥಿವ್ ಪಾಟೇಲ್ (1), ಮ್ಯಾಥ್ಯೂ ಹೇಡನ್ (32), ಜಾರ್ಜ್ ಬೈಲಿ (18), ನಾಯಕ ಸುರೇಶ್ ರೈನಾ (9) ಮ್ತತು ಮುರಳಿ ವಿಜಯ್ (3) ವಿಕೆಟ್ ಒಪ್ಪಿಸಿ ಚೆನ್ನೈ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದರು.
ಅಂತಿಮ ಹಂತದಲ್ಲಿ ಎಸ್ ಬದರಿನಾಥ್ (31) ಮತ್ತು ಆಲ್ಬಿ ಮೊರ್ಕೆಲ್ (19) ವ್ಯರ್ಥ ಹೋರಾಟ ನಡೆಸಿದ್ದು ಪ್ರಯೋಜನಕ್ಕೆ ಬರಲಿಲ್ಲ. ಅಂತಿಮವಾಗಿ ರೈನಾ ಪಡೆ 20 ಓವರುಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 135 ರನ್ ಗಳಿಸಲಷ್ಟೇ ಸಾಧ್ಯವಾಯಿತು.ಆರ್ ಸಿಬಿ ಪರ ಮಾರಕ ದಾಳಿ ನಡೆಸಿದ ದಾವಣಗೆರೆ ಎಕ್ಸ್ ಪ್ರೆಸ್ ವಿನಯ್ ಕುಮಾರ್ ನಾಲ್ಕು ಹಾಗೂ ಅನುಭವಿ ಬೌಲರ್ ಅನಿಲ್ ಕುಂಬ್ಳೆ ಮತ್ತು ಪ್ರವೀಣ್ ಕುಮಾರ್ ತಲಾ ಒಂದು ವಿಕೆಟ್ ಗಳಿಸಿದರು.
ಅಂತಿಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ವಿರುದ್ಧದ ಪಂದ್ಯವನ್ನು 36 ರನ್ನುಗಳ ಅಂತರದಿಂದ ಗೆದ್ದು ಜಯಭೇರಿ ಬಾರಿಸಿತು.ಈ ಮೂಲಕ ಸತತ ನಾಲ್ಕನೇ ಜಯ ದಾಖಲಿಸಿರುವ ಅನಿಲ್ ಕುಂಬ್ಳೆ ಬಳಗ ಎಂಟು ಪಾಯಿಂಟ್‌ಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ್ಕಕೇರಿದೆ.ಬಿರುಸಿನ ಬ್ಯಾಟಿಂಗ್ ನಡೆಸಿದ ಉತ್ತಪ್ಪ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರು.
-
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
Nora Fatehi: ಕನ್ನಡ ಹಾಡಿನಿಂದ ವಿವಾದಕ್ಕೆ ಸಿಲುಕಿರುವ ಬಾಲಿವುಡ್ನ ಡ್ಯಾನ್ಸ್ ಕ್ವೀನ್ ನೋರಾ ಫತೇಹಿ ಅಸಲಿ ಕಥೆ ಇದು -
March 18 Horoscope: ಧನ, ಆರೋಗ್ಯ, ಉದ್ಯೋಗದ ಭವಿಷ್ಯ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Bengaluru Rent: ಬೆಂಗಳೂರಲ್ಲಿ ನಾನ್ವೆಜ್ ಪ್ರಿಯರಿಗೆ ಶಾಕ್: ಮಾಂಸಾಹಾರಿಗಳಿಗೆ ಸಿಗ್ತಿಲ್ಲ ನಗರದಲ್ಲಿ ಬಾಡಿಗೆ ಮನೆ -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್ -
Karnataka Rain Alert: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ, ಮಿನಿ ಕಾಶ್ಮೀರದಂತಾದ ರಸ್ತೆಗಳು; ಇನ್ನೆಷ್ಟು ದಿನ ವರುಣನ ಆರ್ಭಣ?












Click it and Unblock the Notifications