ನಿತ್ಯಾನಂದನ ನಾಶಕ್ಕೆ 200 ಕೋ ಖರ್ಚು!

ಅತೀ ಕಿರಿಯ ವಯಸ್ಸಿನಲ್ಲಿ ಜನಪ್ರಿಯತೆ ಉತ್ತುಂಗ. ಕೋಟ್ಯಂತರ ದುಡ್ಡು. ದೇಶ ವಿದೇಶಗಳಲ್ಲಿ ಆಶ್ರಮಗಳ ಶಾಖೆಗಳ ಸ್ಥಾಪನೆ. ನಿತ್ಯಾನಂದನ ಧ್ಯಾನ ಶಿಬಿರಕ್ಕೆ ಸಾವಿರಾರು ವಿದೇಶಿ ಭಕ್ತರು ಜಮಾಯಿಸುವುದು. ಈ ಎಲ್ಲ ಸಂಗತಿಗಳು ನಿತ್ಯಾನಂದನ ವಿರೋಧಿಗಳ ಕಣ್ಣು ಕುಕ್ಕುವಂತೆ ಮಾಡಿದೆ.
ಅಲ್ಲದೇ ಚೆನ್ನೈ ಮೂಲದ ಎರಡು ಚರ್ಚ್ ಗಳಿಗೆ ವಿದೇಶದಿಂದ 200 ಕೋಟಿ ರುಪಾಯಿಗಳು ಬಂದಿದೆ. ಹೇಗಾದರೂ ಮಾಡಿ ನಿತ್ಯಾನಂದನನ್ನು ಮಟ್ಟಹಾಕಬೇಕು ಎಂಬುದು ಇವುಗಳು ಏಕೈಕ ಉದ್ದೇಶ. ಕಳೆದ ಒಂದು ವರ್ಷದಿಂದ ಸಂಚು ರೂಪಿಸಿ ರಾಸಲೀಲೆ ಎಂಬ ನಕಲಿ ಬಲೆಯಲ್ಲಿ ಕೆಡವಿಕೊಂಡು ನಿತ್ಯಾನಂದನ ಇಮೇಜ್ ನ್ನು ಸಂಪೂರ್ಣ ನಾಶ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣದಲ್ಲಿ ಚೆನ್ನೈ ಮೂಲಕ ಸನ್ ಟಿವಿ ನೆಟ್ ವರ್ಕ್ಸ್ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ ಎಂಬ ಆರೋಪವು ಇದೆ.
ನಿತ್ಯಾನಂದನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಪ್ರವೀಣ ತೊಗಾಡಿಯಾ, ಇದೊಂದು ಪೂರ್ವ ನಿಯೋಜಿತ ಸಂಚು. ಕೆಲವರು ನಿತ್ಯಾನಂದನ ವಿರುದ್ದ ಸಂಚು ರೂಪಿಸುವ ಮೂಲಕ ಹಿಂದು ಧರ್ಮಕ್ಕೆ ಅವಹೇಳನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ತಮಿಳರ ಕೈವಾಡವನ್ನು ಅಲ್ಲಗಳೆಯುವಂತಿಲ್ಲ. ರಾಸಲೀಲೆ ಸಿಡಿಯನ್ನು ನಂಬಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಪ್ರಕರಣ ಬೆಳಕಿಗೆ ಬಂದ ಮರುದಿನವೇ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಇದೊಂದು ಸಂಚು ಎಂದು ಆರೋಪಿಸಿದ್ದರು.












Click it and Unblock the Notifications