ವಿಎಚ್ ಪಿ ಮುಖಂಡ ತೊಗಾಡಿಯಾ ಬಂಧನ
ಭುವನೇಶ್ವರ,
ಮಾ.20: ಒರಿಸ್ಸಾದಲ್ಲಿನ ಗಲಭೆಪೀಡಿತ ಕಂಧಮಾಲ್ ಜಿಲ್ಲೆಗೆ ಭೇಟಿ ನೀಡಲು ಪ್ರಯತ್ನಿಸಿದ ವಿಶ್ವ ಹಿಂದೂ ಪರಿಷತ್ ನ ಮುಖಂಡ ಪ್ರವೀಣ್ ತೊಗಾಡಿಯಾ ಸೇರಿದಂತೆ ಅವರ ಬೆಂಬಲಿಗರನ್ನು ಪೊಲೀಸರು ಶುಕ್ರವಾರ ಮಧ್ಯರಾತ್ರಿ ಬಂಧಿಸಿದ್ದಾರೆ. id="toptextpromo"> ಜಿಲ್ಲೆಯ ಚಾರಿಚೌಕ್ ನಲ್ಲಿರುವ ಅರಣ್ಯ ಪರೀಕ್ಷಕರ ಬಂಗಲೆಯಲ್ಲಿ ತೊಗಾಡಿಯಾ ಅವರನ್ನು ಬಂಧಿಸಿ ಇಡಲಾಗಿದೆ. ತೊಗಾಡಿಯಾ ಅವರ ಬಂಧನವನ್ನು ವಿರೋಧಿಸಿ ವಿಶ್ವ ಹಿಂದು ಪರಿಷತ್ 12 ಗಂಟೆಗಳ ಕಾಲ ಕಂಧಮಾಲ್ ಬಂದ್ ಗೆ ಕರೆನೀಡಿದೆ. ನಿಷೇಧಾಜ್ಞೆ ಜಾರಿಯಲ್ಲಿದ್ದ ಕಾರಣ ತೊಗಾಡಿಯಾ ಅವರನ್ನು ಕಂಧಮಾಲ್ ಗೆ ಭೇಟಿ ನೀಡಲು ಬಿಡಲಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>2008ರಲ್ಲಿ
ವಿಶ್ವ ಹಿಂದು ಪರಿಷತ್ ನ ಸ್ಥಳೀಯ ನಾಯಕ ಸ್ವಾಮಿ ಲಕ್ಷ್ಮಣಾನಂದಸರಸ್ವತಿ ಅವರನ್ನು ಶಂಕಿತ ಮಾವೋವಾದಿಗಳು ಹತ್ಯೆ ಮಾಡಿದ್ದರು. ಆ ಬಳಿಕ ಕಂಧಮಾಲ್ ಜಿಲ್ಲೆಯಾದ್ಯಂತ ಕೋಮು ದಳ್ಳುರಿ ಭುಗಿಲೆದ್ದು ಗಲಭೆಗೆ ಕಾರಣವಾಗಿತ್ತು.











Click it and Unblock the Notifications