ನಿತ್ಯಾನಂದ ವಿರುದ್ಧ ಕೃಷ್ಣ ಸೋದರ ಸಂಬಂಧಿ ದೂರು

''ನನ್ನ ಸ್ವಂತ ನಿರ್ಣಯದ ಮೇರೆಗೆ ಸ್ವಾಮಿ ನಿತ್ಯಾನಂದ ವಿರುದ್ಧ ದೂರು ಕೊಡಲು ಮುಂದೆ ಬಂದಿದ್ದೇನೆ. ರಾಜ್ಯ ಜನತೆಯ ಧಾರ್ಮಿಕ ಭಾವನೆಗಳಿಗೆ ಸ್ವಾಮಿ ನಿತ್ಯಾನಂದ ಧಕ್ಕೆ ತಂದಿದ್ದಾರೆ. ಇಂಥಹವರ ವಿರುದ್ಧ ರಾಜ್ಯದಲ್ಲಿ ದೂರು ನೀಡಲು ಇದುವರೆಗೂ ಯಾರು ಮುಂದೆ ಬರಲಿಲ್ಲ. ಹಾಗಾಗಿ ತಾವು ದೂರು ನೀಡುತ್ತಿರುವುದಾಗಿ ಗುರುಚರಣ್ ತಿಳಿಸಿದ್ದಾರೆ.
ಗುರುಚರಣ್ ಅಷ್ಟೇ ಅಲ್ಲದೆ ಸ್ವಾಮೀಜಿ ವಿರುದ್ಧ ಕನ್ನಡದ ನಟ ಪ್ರವೀಣ್ ಸಹ ದೂರು ನೀಡಿದ್ದಾರೆ. ಸ್ವಾಮೀಜಿ ವಿರುದ್ಧ ದೂರು ಕೊಟ್ಟವರಿಬ್ಬರೂ ಮಂಡ್ಯ ಜಿಲ್ಲೆಯವರಾಗಿರುವುದು ವಿಶೇಷ. ಸ್ವಾಮಿ ನಿತ್ಯಾನಂದ ವಿರುದ್ಧ ಈಗಾಗಲೆ ಅತ್ಯಾಚಾರ, ವಂಚನೆ, ಅನೈತಿಕ ಸಂಬಂಧಗಳ ಬಗ್ಗೆ ಈಗಾಗಲೆ ಹಲವಾರು ದೂರುಗಳು ದಾಖಲಾಗಿವೆ.
ಏತನ್ಮಧ್ಯೆ ಕರ್ನಾಟಕ ಪೊಲೀಸರು ಸ್ವಾಮೀಜಿ ಪತ್ತೆಗಾಗಿ ಹುಡುಕಾಟ ಆರಂಭಿಸಿದ್ದಾರೆ. ನಟಿ ರಂಜಿತಾ ಜೊತೆಗಿನ ಲೈಂಗಿಕ ವಿಡಿಯೋ ಚಿತ್ರೀಕರಣ ಬಿಡದಿ ಆಶ್ರಮದಲ್ಲೆ ಚಿತ್ರೀಕರಿಸಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ರಾಸಲೀಲೆ ಪ್ರಕರಣವನ್ನು ತಮಿಳುನಾಡಿನಿಂದ ಕರ್ನಾಟಕ್ಕೆ ವರ್ಗಾಯಿಸಲಾಗಿದೆ.












Click it and Unblock the Notifications