ತಿಪಟೂರು ಶ್ರೀ ಮಲ್ಲಿಕಾರ್ಜುನಸ್ವಾಮಿ ರಥೋತ್ಸವ

ರಥೋತ್ಸವ ಮಾ.23ರವರೆಗೆ ನಡೆಯಲಿದ್ದು, ಶ್ರೀ ಕ್ಷೇತ್ರದ ಅಧ್ಯಕ್ಷರಾದ ಬಳ್ಳೆಕಟ್ಟೆ, ಶಿಡ್ಲೇಹಳ್ಳಿ ಸಂಸ್ಥಾನದ ಶ್ರೀ ಮದುಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಜಗದ್ಗುರು ಶ್ರೀ ಇಮ್ಮಡಿ ಕರಿಬಸವ ದೇಶಿಕೇಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಏರ್ಪಡಿಸಿರುವ ಕಾರ್ಯಕ್ರಮ ಮಾ.23ರವರೆಗೆ ನಡೆಯಲಿದೆ.
ರುದ್ರಾಭಿಷೇಕ, ಗಣಪತಿ ಪೂಜೆ, ಕುಂಕುಮಾರ್ಚನೆ, ನಂದಿವಾಹನೋತ್ಸವಗಳಿಂದ ರಥೋತ್ಸವ ಪ್ರಾರಂಭವಾಯಿತು. ಮಾ. 22ರಂದು ಬೆಳಿಗ್ಗೆ 11ಗಂಟೆಗೆ ಶ್ರೀ ಸ್ವಾಮಿ ಗಿರಿಜಾ ಕಲ್ಯಾಣ ಮತ್ತು ಸಾಮೂಹಿಕ ವಿವಾಹ, ಮಧ್ಯಾಹ್ನ 3ಗಂಟೆಗೆ ಧಾರ್ಮಿಕ ಸಭೆ, ರಾತ್ರಿ 9.30ಕ್ಕೆ ಭೂಕೈಲಾಸೋತ್ಸವ, ನಂದೀಧ್ವಜ ಕುಣಿತ, ಕರಡೇವು ವಾದ್ಯಮತ್ತಿತರ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಮಾ.23 ರಂದು ಶ್ರೀ ಮಲ್ಲಿಕಾರ್ಜುನಸ್ವಾಮಿಯವರ ರಥೋತ್ಸವ ರಾಜಬೀದಿಗಳಲ್ಲಿ ವೈಭವದಿಂದ ನಡೆಯಲಿದೆ . ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ದೇವರ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ಶ್ರೀ ಕ್ಷೇತ್ರದ ಕಾರ್ಯಾಧ್ಯಕ್ಷ ಬಿ.ಬಿ. ಸಿದ್ದಲಿಂಗಮೂರ್ತಿ ಮತ್ತು
ಕನ್ವೀನರ್ ಗೋಪಾಲಯ್ಯ ಪ್ರಕಟಣೆಯಲ್ಲಿ ತಿಳಿಸಿದರು.












Click it and Unblock the Notifications