22ಕ್ಕೆ ಮಹಾಲಿಂಗೇಶ್ವರನಿಗೆ ಬ್ರಹ್ಮರಥ ಸಮರ್ಪಣೆ
ಪುತ್ತೂರು,
ಮಾ. 18:ಪುರಾಣ ಪ್ರಸಿದ್ದ ಇಲ್ಲಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ಮಾರ್ಚ್ 22 ರಂದು ಉದ್ಯಮಿ, ಮತ್ತು ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಎನ್ ಮುತ್ತಪ್ಪ ರೈ ಬ್ರಹ್ಮರಥ ಸಮರ್ಪಿಸಲಿದ್ದಾರೆ. id="toptextpromo">71
ಅಡಿ ಇರುವ ಮತ್ತು ರಾಜ್ಯದಲ್ಲೇ ಅತ್ಯಂತ ಎತ್ತರದ ಹೆಗ್ಗಳಿಕೆಯ ಈ ರಥವನ್ನು ಮುತ್ತಪ್ಪ ರೈ ಸುಮಾರು ಒಂದು ಕೋಟಿ ರುಪಾಯಿ ವೆಚ್ಚದಲ್ಲಿ ದೇವಸ್ಥಾನಕ್ಕೆ ಅರ್ಪಿಸುತ್ತಿದ್ದಾರೆ. ಸುಮಾರು 55 ಟನ್ ಭಾರವಿರುವ ಈ ರಥವನ್ನು ಉಡುಪಿ ಮತ್ತು ಕಾಸರಗೋಡಿನಿಂದ ಬಂದ 20 ಕುಶಲಕರ್ಮಿಗಳು ತೇಗದಮರದಿಂದ ಎರಡು ವರ್ಷದ ಅವಧಿಯಲ್ಲಿ ತಯಾರಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಮಾರ್ಚ್
16 ರಿಂದ ಆರಂಭಗೊಂಡು ಒಂದು ವಾರ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ದೇವರಿಗೆ ಈ ರಥ ಸಮರ್ಪಣೆಯಾಗಲಿದೆ. ತುಳುನಾಡ ಪದ್ದತಿಯಂತೆ ಮಂಗಳೂರು, ಉಡುಪಿ, ಸಕಲೇಶಪುರ, ಹಾಸನ, ಕಾಸರಗೋಡು ಮತ್ತು ಮಡಿಕೇರಿಯಿಂದ ದೇವಾಲಯಕ್ಕೆ ಭಾರೀ ಪ್ರಮಾಣದ ಹೊರೆಕಾಣಿಕೆ ಹರಿದು ಬರುತ್ತಿದೆ. ಸುಮಾರು ನಾಲ್ಕು ಲಕ್ಷ ಜನರಿಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.











Click it and Unblock the Notifications