ಭಗವದ್ಗೀತೆ ಪ್ರವಚನ ವೆಬ್ ಸೈಟ್ ಗೆ ಚಾಲನೆ

ಸತ್ಯದರ್ಶನ ಕಾರ್ಯಕ್ರಮ ಖ್ಯಾತಿಯ ಪಾವಗಡ ಪ್ರಕಾಶ್ ರಾವ್ ಅವರ ಪ್ರವಚನ ಮಾಲಿಕೆ ಚಂದನ ವಾಹಿನಿಯಲ್ಲಿ ಬಹು ಜನಪ್ರಿಯವಾಗಿದೆ. ಇತ್ತೀಚಿಗೆ ರಾಮಾನುಜಾಚಾರ್ಯರ ಕುರಿತು ಪ್ರವಚನ ಮಾಲಿಕೆ ಅರಂಭಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ದೇವರು, ಧರ್ಮ, ಪುರಾಣ, ಧ್ಯಾನ, ಯೋಗ ಮುಂತಾದ ಮನಶಾಂತಿ ನೀಡುವ ಮಾಹಿತಿ ಸರಕುಗಳಿಗೆ ಬೇಡಿಕೆ ಜಾಗತಿಕ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೂರದರ್ಶನ ಆರಂಭಿಸಿರುವ ಈ ಮಾಲಿಕೆಗೆ ಜನಪ್ರಿಯತೆ ಹರಿದು ಬರುತ್ತಿರುವುದು ಸಹಜವೇ ಆಗಿದೆ ಎಂದು ತಿರುದಾಸ್ ವ್ಯಾಖ್ಯಾನಿಸಿದರು.
ಎಲ್ಲಾ ಧರ್ಮಕ್ಕೂ ಒಪ್ಪಿಗೆ ಆಗುವಂತಹ ಏಕಮಯ ಭಾರತೀಯ ಗ್ರಂಥ ಭಗವದ್ಗೀತೆ ಆಗಿದೆ. ಭಗವದ್ಗೀತೆ ಕೇವಲ ವಯಸ್ಸಾದವರಿಗಲ್ಲ, ವಯಸ್ಸಾದವರಿಗೆ ತಮ್ಮ ಜೀವನದ ಅನುಭವವೇ ಸಾಕು ಎಂದರು. ಗೊಂದಲದಲ್ಲಿ ಜೀವನ ಸಾಗಿಸುತ್ತಿರುವ ಇಂದಿನ ಯುವಪೀಳಿಗೆಗೆ ಭಗವದ್ಗೀತೆ ತುಂಬಾ ಅನುಕೂಲಕರವಾಗಲಿದೆ ಎಂದರು.
ಬೆಂಗಳೂರು ದೂರದರ್ಶನ ಕೇಂದ್ರದ ಹಿರಿಯ ನಿರ್ದೇಶಕ ಡಾ. ಮಹೇಶ್ ಜೋಷಿ, ವಿಜಯನಗರದ ಆದಿಚುಂಚನಗಿರಿ ಮಠದ ಸೋಮನಾಥ ಸ್ವಾಮೀಜಿ, ಸತ್ಯದರ್ಶನ ಖ್ಯಾತಿಯ ಪಾವಗಡ ಪ್ರಕಾಶ್ ರಾವ್, ಶ್ರೀ ದೇವಿ ಕ್ರಿಯೇಷನ್ಸ್ ನ ಬಿಕೆ ದ್ವಾರಕನಾಥ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.












Click it and Unblock the Notifications