ಬುಡಬುಡಿಕಿ ಮಾತು ಕೇಳಿ ಮಕ್ಕಳನ್ನೇ ಕೊಂದ!
ಕೋಲಾರ,
ಮಾ. 15 : ಮಕ್ಕಳಿಂದ ಜೀವಕ್ಕೆ ಕುತ್ತಿದೆ ಎಂದು ಬುಡಬುಡಕೆಯವನು ಹೇಳಿದ ಮಾತನ್ನು ಗಂಭೀರವಾಗಿ ಪರಿಗಣಿಸಿದ ಕಟುಕ ತಂದೆಯೊಬ್ಬ ತನ್ನ ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಶಾಗಭೋಗನಹಳ್ಳಿಯಲ್ಲಿ ನಡೆದಿದೆ. id="toptextpromo">ತಂದೆಯಿಂದಲೇ
ಹತ್ಯೆಗೀಡಾದ ಮಕ್ಕಳನ್ನು ನರಸಿಂಹಮೂರ್ತಿ(6) ಮತ್ತು ನಂದಿನಿ(4) ಎಂದು ಗುರುತಿಸಲಾಗಿದೆ. ಶಾನಭೋಗನಹಳ್ಳಿಯ ಲಕ್ಷ್ಮಣ ಎಂಬಾತ ಪತ್ನಿ ಗಾಯಿತ್ರಮ್ಮ ಕೂಲಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಮಕ್ಕಳನ್ನು ನಾಯಕರಹಳ್ಳಿ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕತ್ತು ಹಿಸುಕಿ ಕೊಂದಿದ್ದಾನೆ. ಕಳೆದ ಬುಧವಾರವೇ ಈ ಕೃತ್ಯ ನಡೆದಿದೆ. id='are-slot-1' class='oiad oi-axt oiadv'> id='top-searched-articles'>ಭಾನುವಾರ
ಮಕ್ಕಳ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮಕ್ಕಳ ಕೊಲೆಗೆ ಕಾರಣವಾಗಿರುವ ತಂದೆ ಲಕ್ಷ್ಮಣ ನಾಪತ್ತೆಯಾಗಿದ್ದಾನೆ. ಗ್ರಾಮಾಂತರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.











Click it and Unblock the Notifications