ಗೋಹತ್ಯೆ ಮಹಾಪಾಪ : ಮುಸ್ಲಿಂ ಮಂಚ್

ಮಾನವೀಯತೆ ಹಾಗೂ ಕೃಷಿ ಪ್ರಗತಿಯ ದೃಷ್ಟಿಯಿಂದ ಈ ಮಸೂದೆಯನ್ನು ಕಾಯಿದೆಯಾಗಿ ಮಾರ್ಪಡಿಸುವ ಅಗತ್ಯ ಇದೆ ಎಂದು ನಗರದ ಶಿಕ್ಷಕರ ಸದನದಲ್ಲಿ ಗೋವಂಶ ಹತ್ಯೆ ಮುಕ್ತ-ಕರ್ನಾಟಕ ನಿರ್ಮಾಣ ಒಕ್ಕೂಟ, ಗೋವಂಶ ರಕ್ಷಾದಳ ಹಾಗೂ ಸರ್ವ ಧರ್ಮ ಸಂಸತ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಧರ್ಮಕ್ಕಿಂತ ಮಾನವೀಯತೆ ಮುಖ್ಯ. ಗೋ ಹತ್ಯೆ ವಿಷಯದಲ್ಲಿ ಧರ್ಮ ಎದುರಿಗೆ ಬರುವುದಿಲ್ಲ. ಮಾನವೀಯತೆ ಮುಖ್ಯವಾಗಲಿದೆ. ಕೃಷಿ ಅಭಿವೃದ್ಧಿಗೆ ಗೋವುಗಳ ಉಳಿವು ಅನಿವಾರ್ಯ. ಈಗಾಗಲೇ ವಿದೇಶಿ ಕೃಷಿ ಪದ್ಧತಿ, ಉತ್ಪನ್ನಗಳ ದುಷ್ಪರಿಣಾಮದ ಅರಿವಾಗಿದೆ. ಹೀಗಾಗಿ ದೇಶದ ಉನ್ನತಿ ದೃಷ್ಟಿಯಿಂದ ಪ್ರತಿಯೊಬ್ಬರೂ ಈ ಕಾಯಿದೆ ಜಾರಿಗೆ ಶ್ರಮಿಸಬೇಕು ಎಂದರು.
ಬಸವ ಧರ್ಮ ಪೀಠದ ಮುಖ್ಯಸ್ಥೆ ಮಾತೆ ಮಹಾದೇವಿ ಮಾತನಾಡಿ, ಗೋವುಗಳ ಹತ್ಯೆ ವಿಷಯದಲ್ಲಿ ಧರ್ಮವನ್ನು ಅಡ್ಡ ತರುವುದು ಸರಿಯಲ್ಲ. ಇದು ಧಾರ್ಮಿಕ ಸಮಸ್ಯೆ ಅಲ್ಲ. ಬದಲಾಗಿ ರಾಷ್ಟ್ರೀಯ ಸಮಸ್ಯೆ. ಸಾವಯವ ಕೃಷಿಗೆ ಜಾನುವಾರುಗಳ ಅಗತ್ಯವಿದೆ ಎಂದು ಸೂಚಿಸಿದರು.
ಮುಸ್ಲಿಂ ರಾಷ್ಟ್ರೀಯ ಮಂಚ್‌ನ ಕೆ.ಎಂ.ಅನೀಸ್ ಉಲ್ ಹಕ್ ಮಾತನಾಡಿ, ಮುಸ್ಲಿಮರು ಹಾಗೂ ಅವರ ಧರ್ಮ ಗುರುಗಳು ಎಲ್ಲಿಯೂ ಗೋಹತ್ಯೆಯನ್ನು ಪ್ರೋತ್ಸಾಹಿಸಿಲ್ಲ. ಧರ್ಮದಲ್ಲಿ ಗೋಹತ್ಯೆ ಪಾಪ ಎಂದು ಹೇಳಲಾಗಿದೆ. ಅಲ್ಪಸಂಖ್ಯಾತರ ಹೆಸರಿನಲ್ಲಿ ರಾಜಕೀಯ ಮುಖಂಡರು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಇಂಥ ರಾಜಕಾರಣಿಗಳ ವಿರುದ್ಧ ಎಚ್ಚೆತ್ತುಕೊಳ್ಳಬೇಕಿದೆ ಎಂದು ಹೇಳಿದರು.












Click it and Unblock the Notifications