ಸ್ಥಳೀಯರಿಗೆ ನೇಮಕಾತಿಯಲ್ಲಿ ಮೀಸಲಾತಿ
ನವದೆಹಲಿ,
ಮಾ. 12 : ಕನ್ನಡನಾಡಿನಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ, ಆನಂತರ ಇತರರಿಗೆ. ಪ್ರಮುಖವಾಗಿ ಕರ್ನಾಟಕದಲ್ಲಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವಲ್ಲಿ ಮತ್ತು ನೇಮಕಾತಿಗಳಲ್ಲಿ ಸ್ಥಾನಿಕರಿಗೆ ಇಂತಿಷ್ಟು ಹುದ್ದೆಗಳು ಎಂಬ ಮೀಸಲಾತಿ ನೀತಿಯನ್ನು ಜಾರಿಮಾಡಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ನವದೆಹಲಿಯಲ್ಲಿ ಕಹಳೆ ಊದಿದ್ದಾರೆ. id="toptextpromo"> ಸಾಹಿತಿ, ಕಲಾವಿದರು ಹಾಗೂ ಕನ್ನಡ ಸಂಘ ಸಂಸ್ಥೆಗಳ ಮುಖಂಡರುಗಳನ್ನೊಳಗೊಂಡ ಒಂದು ನಿಯೋಗವನ್ನು ದೆಹಲಿಗೆ ಕೊಂಡೊಯ್ದಿರುವ ಚಂದ್ರು ರಾಜಧಾನಿಯಲ್ಲಿ ನಾನಾ ಸಚಿವರು, ಅಧಿಕಾರಿಗಳನ್ನು ಭೇಟಿಮಾಡಿ ಕನ್ನಡ, ಕನ್ನಡಿಗರ ಹಕ್ಕೊತ್ತಾಯ ಸಲ್ಲಿಸಿದ್ದಾರೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಘೋಷಿಸಿದ ಮಾತ್ರಕ್ಕೆ ಕೆಲಸ ಮುಗಿಯುವುದಿಲ್ಲ. ಕನ್ನಡ ಭಾಷೆಯ ಅಧ್ಯಯನ ಮತ್ತು ಬೆಳವಣಿಗೆಗೆ ಪೂರಕವಾಗುವಂತೆ ಶಾಸ್ತ್ರೀಯ ಸ್ಥಾನಮಾನದ ಉದ್ದೇಶಿತ ಗುರಿ ತಲಪುವ ತನಕ ತಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಅವರು ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ. id='are-slot-1' class='oiad oi-axt oiadv'> id='top-searched-articles'> ಸ್ಥಳೀಯರಿಗೆ ನೇಮಕಾತಿಗಳಲ್ಲಿ ಮೀಸಲಾತಿ ಕುರಿತಂತೆ ಚಂದ್ರು ಗುರುವಾರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಮಾಡಿದ್ದರು. ಈಗಾಗಲೇ ಸ್ಥಳೀಯರಿಗೆ ನೇಮಕಾತಿ ವಿಷಯದಲ್ಲಿ ಆದ್ಯತೆ ನೀಡಲಾಗಿದೆ, ಇದಕ್ಕೆ ಇ ಎಸ್ ಐ ಆಸ್ಪತ್ರೆಗಳಲ್ಲಿ ವೈದ್ಯರ ನೇಮಕಾತಿ ಮೀಸಲಾತಿ ಜಾರಿಗೊಳಿಸಲಾಗಿದೆ ಎಂದು ಖರ್ಗೆ ನಿಯೋಗಕ್ಕೆ ತಿಳಿಸಿದರು.











Click it and Unblock the Notifications