ಶೋಭಾ ಕೂಗಿಗೆ ಜಗ್ಗಿದ ಸಿದ್ಧರಾಮಯ್ಯ!
ಬೆಂಗಳೂರು,
ಮಾ. 11 : ನಿಮ್ಮೊಬ್ಬರನ್ನೇ ತಡೆದುಕೊಳ್ಳಲು ಆಗುತ್ತಿಲ್ಲ, ಇನ್ನು ಶೇ.33ರಷ್ಟು ಮಂದಿ ಮಹಿಳೆಯರು ವಿಧಾನಸಭೆ ಪ್ರವೇಶಿಸಿದರೆ ಹೇಗೆ? ಹೀಗೆ ಆತಂಕ ವ್ಯಕ್ತಪಡಿಸಿದವರು ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ. ಚರ್ಚೆ ಸಮಯದಲ್ಲಿ ಜೋರು ಧ್ವನಿಯಲ್ಲಿ ವಾದ ಮಾಡಿದ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಕುರಿತು ಆಡಿದ ಮಾತಿದು. id="toptextpromo">ವಿಧಾನಮಂಡಲದ
ಕಲಾಪದ ಶೂನ್ಯ ವೇಳೆಯಲ್ಲಿ ದಕ್ಷಿಣ ಕನ್ನಡ ಕೃಷಿಕರ ಮಾರಾಟ ಸಂಘಕ್ಕೆ ಕಳೆದ ಬಜೆಟ್‌ನಲ್ಲಿ ಮೀಸಲಿಟ್ಟ 12 ಕೋಟಿ ರುಪಾಯಿ ಬಿಡುಗಡೆ ಮಾಡದ ಕುರಿತು ಕಾಂಗ್ರೆಸ್‌ನ ರಮಾನಾಥ ರೈ ಅವರು ತೀವ್ರ ವಾಗ್ದಾಳಿ ನಡೆಸುತ್ತಿದ್ದಾಗ ಮಧ್ಯ ಪ್ರವೇಶಿಸಿದ ಶಾಸಕಿ ಶೋಭಾ ಕರಂದ್ಲಾಜೆ ಜೋರು ಧ್ವನಿಯಲ್ಲಿ ವಾದ ಮಂಡಿಸಿದರು. id='are-slot-1' class='oiad oi-axt oiadv'> id='top-searched-articles'>ಸಚಿವ
ಸ್ಥಾನ ಹೋದ ನಂತರ ಸದನದಲ್ಲಿ ಸುಮ್ಮನಾಗಿದ್ದ ಶೋಭಾ ಅವರು, ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾದ ಕೂಡಲೇ ಧ್ವನಿ ಎತ್ತರಿಸಿ ಬಿಟ್ಟಿದ್ದಾರೆ. ಇವರೊಬ್ಬರು ಮಾತನಾಡಿದರೆ ನಮಗೆ ತಡೆಕೊಳ್ಳಲು ಕಷ್ಟವಾಗುತ್ತಿದೆ. ಇನ್ನು ಶೇ. 33ರಷ್ಟು ಮಹಿಳೆಯರು ಸದನಕ್ಕೆ ಆಗಮಿಸಿದರೇ ನಮ್ಮ ಗತಿ ಏನು ಎಂದು ಸಿದ್ಧರಾಮಯ್ಯ ತಮಾಷೆ ಮಾಡಿದರು. ಸಿದ್ಧರಾಮಯ್ಯ ಅವರ ನಗೆಚಟಾಕಿ ಸದನವನ್ನು ನಗೆಗಡಲಲ್ಲಿ ತೇಲಿಸಿತು.











Click it and Unblock the Notifications