ಸೋನಿಯಾಜಿಗೆ ಭಾರತರತ್ನ ನೀಡಿ: ಆಂಧ್ರ ಕಾಂಗ್ರೆಸ್

ಸುಮಾರು 13ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಹಿಳಾ ಮೀಸಲಾತಿ ಮಸೂದೆ ಮಂಡನೆ ಹಾಗೂ ರಾಜ್ಯಸಭೆಯಲ್ಲಿ ಅಂಗೀಕಾರವಾಗಲು ಸೋನಿಯಾಜಿ ಅವರೇ ನೇರ ಕಾರಣ. ಬಂಡಾಯ ನಾಯಕರನ್ನು ಮಟ್ಟ ಹಾಕುವ ಅವರ ಕಾರ್ಯವೈಖರಿ ಯುವ ರಾಜಕಾರಣಿಗಳಿಗೆ ಮಾದರಿ . ಪ್ರಧಾನಿ ಪಟ್ಟವನ್ನು ನಿರಾಕರಿಸಿದ ತ್ಯಾಗಮಯಿ ಎಂದೆಲ್ಲಾ ಆಂಧ್ರಪ್ರದೇಶದ ಕಾಂಗ್ರೆಸ್ ಮಹಿಳಾ ಘಟಕ ಸೋನಿಯಾ ಅವರನ್ನು ಹಾಡಿ ಹೊಗಳಿದೆ.
ವಿಡಿಯೋ: ಮಹಿಳಾ ಮೀಸಲಾತಿ ವಿಧೇಯಕ, ಸೋನಿಯಾ ದಿಲ್ ಖುಷ್
ಯುಪಿಎ ಸರ್ಕಾರ ತೆಗೆದುಕೊಳ್ಳುವ ಮಹತ್ವದ ನಿರ್ಧಾರದ ಹಿಂದೆ ಸೋನಿಯಾ ಗಾಂಧಿ ಅವರ ಪರಿಶ್ರಮ ಎದ್ದು ಕಾಣುತ್ತದೆ. ಸರ್ಕಾರ ಹಾಗೂ ದೇಶಕ್ಕೆ ಕಷ್ಟ ಎದುರಾದಾಗ ಅವರು ಸಲೀಸಾಗಿ ಬಗೆಹರಿಸುತ್ತಾರೆ. ಈ ಎಲ್ಲಾ ಕಾರಣಗಳಿಂದ ಅವರು ಭಾರತ ರತ್ನ ಪಡೆಯಲು ಸೂಕ್ತ ವ್ಯಕ್ತಿ ಎಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ಮನವಿ ಪತ್ರವನ್ನು ಫ್ಯಾಕ್ಸ್ ಮೂಲಕ ಕಳಿಸಿದ್ದೇವೆ ಎಂದು ಮಹಿಳಾ ಘಟಕದ ಅಧ್ಯಕ್ಷೆ ಕೆ ಗಂಗಾ ಭವಾನಿ ಹೇಳಿದರು.












Click it and Unblock the Notifications