ಕೊಲ್ಲೂರು ರಥದ ಚಕ್ರಕ್ಕೆ ಭಕ್ತನ ಬಲಿ
ಕೊಲ್ಲೂರು,
ಮಾ. 10:ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಮಹಾರಥೋತ್ಸವದ ವೇಳೆ ನೂಕುನುಗ್ಗಲಿನಿಂದ ರಥದ ಚಕ್ರಕ್ಕೆ ಸಿಲುಕಿ ಕೇರಳದ ಭಕ್ತರೊಬ್ಬರು ಸಾವನ್ನಪ್ಪಿದ್ದು,ಇನ್ನೊಬ್ಬರು ಗಾಯಗೊಂಡಿದ್ದಾರೆ. ಈ ದುರ್ಘಟನೆ ಮಂಗಳವಾರ ಸಂಜೆ ನಡೆದಿದೆ. id="toptextpromo">ಮೃತ
ವ್ಯಕ್ತಿಯನ್ನು ಕೇರಳದ ವಡಗರದ ಎಂ ವಿ ಬಾಬು(48) ಎಂದು ಗುರುತಿಸಲಾಗಿದೆ. ಕಣ್ಣೂರು ನಿವಾಸಿ ಹರಿದಾಸ ಎಂಬುವರು ಗಾಯಗೊಂಡಿದ್ದು ಅವರನ್ನು ಕುಂದಾಪುರದ ಚಿನ್ಮಯ ಆಸ್ಪತ್ರೆಗೆ ಸೇರಿಸಲಾಗಿದೆ.ಈ ಘಟನೆ ಬಗ್ಗೆ ತನಿಖೆ ನಡೆದಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಶ್ವನಾಥ್ ಪಂಡಿತ್ ಹೇಳಿದರು. id='are-slot-1' class='oiad oi-axt oiadv'> id='top-searched-articles'>ರಥ
ಎಳೆಯಲು ಆರಂಭಿಸಿದ ಸಂದರ್ಭದಲ್ಲಿ ರಥದ ಚಕ್ರ ಅಕಸ್ಮಾತ್ ತಿರುಗಿದಾಗ,ಗಾಬರಿಗೊಂಡ ಭಕ್ತ ಸಮೂಹ ನಡೆಸಿದ ತಳ್ಳಾಟದಲ್ಲಿ ಕೆಳಗೆ ಬಿದ್ದ ಬಾಬು ಹಾಗೂ ಹರಿದಾಸ ಅವರು ರಥದ ಚಕ್ರಕ್ಕೆ ಸಿಕ್ಕಿ ಹಾಕಿಕೊಂಡರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಕೊಲ್ಲೂರು ಶ್ರೀಮೂಕಾಂಬಿಕಾ ರಥೋತ್ಸವಕ್ಕಾಗಿ ನೆರೆ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸುತ್ತಾರೆ.











Click it and Unblock the Notifications