ಕಾಫಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ

ಕಾಫಿ ಬೆಳೆಗಾರರಿಗೂ ವಿಶೇಷ ಪ್ಯಾಕೇಜ್ ಜಾರಿಗೆ ತರುವಂತೆ ಪ್ರಧಾನಿ ಡಾ. ಮನ್ ಮೋಹನ್ ಸಿಂಗ್ ಅವರ ಮನವೊಲಿಸಬೇಕೆಂದು ಬಿನ್ನವಿಸಿಕೊಳ್ಳುವ ಮನವಿ ಪತ್ರವನ್ನು ಬೆಳೆಗಾರರು ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.
ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ತಂಡದಲ್ಲಿ ಕರ್ನಾಟಕ ಕಾಫಿ ಬೆಳೆಗಾರರ ಫೆಡರೇಷನ್ನಿನ ಸದಸ್ಯರು ಇದ್ದರು. ಈ ತಂಡದ ಮುಖ್ಯಸ್ಥರಾಗಿ ಲೋಕಸಭಾ ಸದಸ್ಯ ಡಿ ವಿ ಸದಾನಂದ ಗೌಡ ಉಪಸ್ಥಿತರಿದ್ದರು. 2010-11 ರ ಅಂತಿಮ ಬಜೆಟ್ ನಲ್ಲಿ ಪ್ಯಾಕೇಜ್ ಜಾರಿಗೊಳಿಸಬೇಕೆನ್ನುವುದು ಬೆಳೆಗಾರರ ಆಗ್ರಹ.
ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ನಿಯೋಗದಲ್ಲಿ ಜಬ್ಬೀರ್ ಅಗ್ ಸರ್, ಡಾ ಪ್ರದೀಪ್ ಎನ್ ಕೆ, ಅಜೋಯ್ ತಿಪ್ಪಯ್ಯ, ನಂದ ಬೆಳ್ಳಿಯಪ್ಪ, ಎಸ್ ಬಿ ಗಣೇಶ್ ಮೊದಲಾದವರು ಭಾಗವಹಿಸಿದ್ದರು.











Click it and Unblock the Notifications