ಸ್ವಾಮಿ ನಿತ್ಯಾನಂದಗೆ ಶ್ರೀರಾಮಸೇನೆ ಬೆಂಬಲ

ಈ ನಡುವೆ ನಿತ್ಯಾನಂದನ ಕಾಮಕೇಳಿ ಬಹಿರಂಗವಾಗುತ್ತಿದ್ದಂತೆ ನಿತ್ಯಾನಂದನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ಪ್ರಮೋದ್ ಮುತಾಲಿಕ್‌ರ ಶ್ರೀರಾಮಸೇನೆಯ ಕೆಲವು ಕಾರ್ಯಕರ್ತರು ಸೋಮವಾರ ನಿತ್ಯಾನಂದನ ಬೆಂಬಲ ವ್ಯಕ್ತಪಡಿಸಿದರು.
ನಿತ್ಯಾನಂದನ ಕಾಮಕಾಂಡದ ಹಿಂದೆ ಷಡ್ಯಂತ್ರ ನಡೆದಿದೆ, ಹಿಂದೆಯೂ ಹಲವು ಸ್ವಾಮೀಜಿಗಳ ಬಗ್ಗೆ ಹುನ್ನಾರ ನಡೆಸಿದ್ದರು. ಪ್ರವರ್ಧಮಾನಕ್ಕೆ ಬರುತ್ತಿರುವ ಹಿಂದೂ ಸಮಾಜದ ಸ್ವಾಮೀಜಿಗಳ ವಿರುದ್ದ ವ್ಯವಸ್ಥಿತ ಸಂಚು ನಡೆಸಿ ತೇಜೋವಧೆ ಮಾಡುತ್ತಿದ್ದಾರೆ. ಕೆಲವು ಕ್ರೈಸ್ತ ಮಷಿನರಿಗಳು ಹಿಂದೂ ಧರ್ಮದ ಸಮಾಜದ ಮಠಾಧೀಶರುಗಳಿಗೆ ಕಪ್ಪು ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆಂದು ಶ್ರೀರಾಮಸೇನೆಯ ನಾಗರಾಜು ನಾಯ್ಡು ಹೇಳುವ ಮೂಲಕ ಕಾವಿ ಕಾಮಿ ನಿತ್ಯಾನಂದನ ಸೆಕ್ಸ್ ಸ್ಕ್ಯಾಂಡಲ್‌ಗೆ ಮತ್ತೊಂದು ತಿರುವು ನೀಡಿದ್ದಾರೆ.
ಇಷ್ಟೆಲ್ಲಾ ನಡೆಯುತ್ತಿದ್ದರೂ ಪೋಲೀಸರು ಮಾತ್ರ ಇಲ್ಲಿಯವರೆಗೂ ಮಠದ ಸಿಬ್ಬಂದಿಗಳು ಹೇಗೆ ಹೇಳುತ್ತಾರೋ ಹಾಗೆಯೇ ಕೇಳುತ್ತಿದ್ದಾರೆ. ಸ್ವತಂತ್ರವಾಗಿ ಹೋಗಿ ಯಾರೊಬ್ಬರು ಮಠದಲ್ಲಿ ಏನು ನಡೆಯುತ್ತಿದೆ. ವಿದೇಶೀಯರು ಇದ್ದಾರೋ ಇಲ್ಲವೋ ಎಂಬುದನ್ನ ಗಮನಿಸುವ ಪ್ರಯತ್ನವನ್ನೇ ಪೋಲೀಸರು ಮಾಡುತ್ತಿಲ್ಲ. ಸರಕಾರ ಕೂಡ ಜಾಣಕುರುಡುತನ ಪ್ರದರ್ಶಿಸುತ್ತಿದೆ.
ನಿತ್ಯಾನಂದನ ಜನ್ಮದಿನಾಂಕ, ಆತ ಪಡೆದಿರುವ ಪದವಿ ಕುರಿತಂತೆಯೂ ಅನೇಕ ಪ್ರಶ್ನೆಗಳು ಎದ್ದಿವೆ. 1978ರಲ್ಲಿ ಜನಿಸಿರುವ ನಿತ್ಯಾನಂದ 1990ರಿಂದ 1993ರ ಅವಧಿಯಲ್ಲಿ ಎಲೆಕ್ಟ್ರಾನಿಕ್ ಡಿಪ್ಲೋಮಾ ಮಾಡಿದ್ದಾರೆಂದು ತಮ್ಮ ವೆಬ್‌ಸೈಟ್‌ಗಳಲ್ಲಿ ಪ್ರಕಟಮಾಡಿಕೊಂಡಿದ್ದಾರೆ. 12ನೇ ವಯಸ್ಸಿಗೆ ಡಿಪ್ಲೋಮಾ ಕೋರ್ಸ್ ಮಾಡಲು ಹೇಗೆ ಸಾಧ್ಯ? ಇದಕ್ಕೆ ಬೆಂಬಲಿಗರ ಬಳಿ ಉತ್ತರವೇ ಇಲ್ಲ.












Click it and Unblock the Notifications