ವಂಚಿತೆ ಪ್ರಿಯಾಂಕಾಳಿಗೆ ಡಿಎನ್ಎ ರಕ್ಷೆ

ಪ್ರಿಯಾಂಕಾ ಹಾಗೂ ಆನಂದನ ರಕ್ತ ಕಣಗಳನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವಂತೆ 8ನೇ ಎಸಿಎಂಎಂ ನ್ಯಾಯಾಧೀಶರು ಆದೇಶ ನೀಡಿದ್ದರು. ಅದರಂತೆ ಪ್ರಯೋಗಾಲಯದ ಸಿಬ್ಬಂದಿ ಪರೀಕ್ಷೆಯ ವರದಿ ಮತ್ತು ಸಂಬಂಧಪಟ್ಟ ದಾಖಲೆಗಳನ್ನು ನ್ಯಾಯಾಧೀಶರಿಗೆ ಸಲ್ಲಿಸಿದ್ದಾರೆ.
ಪ್ರಿಯಾಂಕಾಳ ಪ್ರೇಮ ಪ್ರಕರಣದ ವಿವಾದ ರಾಜ್ಯಾದ್ಯಂತ ತೀವ್ರ ವಿವಾದ ಹುಟ್ಟುಹಾಕಿತ್ತು. ಅಲ್ಲದೇ ಪ್ರಿಯಾಂಕಳನ್ನು ವಂಚಿಸಿದ್ದ ಆನಂದ ತಾನು ಪ್ರಿಯಾಂಕಾಳನ್ನು ವಂಚಿಸಿಯೇ ಇಲ್ಲ ಎಂದು ವಾದಿಸಿದ್ದ. ಈ ಸಂದರ್ಭದಲ್ಲಿ ಬೆಂಗಳೂರಿನ ಅನೇಕ ಸಂಘ ಸಂಸ್ಥೆಗಳು, ಸ್ತ್ರೀ ಸಂಘಟನೆಗಳು ಪ್ರಿಯಾಂಕಾ ಬೆನ್ನಿಗೆ ನಿಂತು, ಹೋರಾಟ ನಡೆಸಿದ್ದವು.
ನಂದಿನಿ ಲೇಔಟ್ ನಿವಾಸಿಯಾಗಿರುವ ಪ್ರಿಯಾಂಕಾ ಕಳೆದ ನಾಲ್ಕು ವರ್ಷಗಳಿಂದ ಆನಂದ್ ಎಂಬಾತನನ್ನು ಪ್ರೀತಿಸುತ್ತಿದ್ದರು. ಆದರೆ, ಆನಂದ್ ಪ್ರೀತಿಸುವ ನಾಟಕವಾಡಿ ಆಕೆಯನ್ನು ಗರ್ಭಿಣಿ ಮಾಡಿ, ತಿರುಮಲ ಎಂಬ ಮತ್ತೊಬ್ಬ ಯುವತಿಯನ್ನು ಮದುವೆ ಮಾಡಿಕೊಂಡಿದ್ದ.












Click it and Unblock the Notifications