ಶಿವಮೊಗ್ಗ ಹಿಂದೂ ಸಮಾವೇಶ 21ಕ್ಕೆ
ಶಿವಮೊಗ್ಗ,
ಮಾ. 5 : ಜಿಲ್ಲಾಡಳಿತ ಮತ್ತು ಪೋಲೀಸ್ ಅಧಿಕಾರಿಗಳ ಕೋರಿಕೆಯ ಮೇರೆಗೆ ಇದೇ ಮಾರ್ಚ್ 7ರಂದು ಶಿವಮೊಗ್ಗದಲ್ಲಿ ನಡೆಸಲು ಉದ್ದೇಶಿಸಲಾಗಿದ್ದ "ವಿರಾಟ್ ಹಿಂದೂ ಯುವ ಸಮಾವೇಶ"ವನ್ನು ಮುಂದೂಡಲಾಗಿದೆ. id="toptextpromo">7ನೇ
ತಾರಿಖಿಗೆ ಬದಲಾಗಿ ಮಾರ್ಚ್ 21ರ ಭಾನುವಾರದಂದು ಸಮಾವೇಶ ನಡೆಸಲು ನಿಶ್ಚಯಿಸಲಾಗಿದ್ದು, ಸಮಾವೇಶಕ್ಕೆ ಹಿಂದು ಸಮಾಜದ ಬಾಂಧವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಬಜರಂಗದಳದ ಪತ್ರಿಕಾ ಹೇಳಿಕೆ ತಿಳಿಸಿದೆ. id='are-slot-1' class='oiad oi-axt oiadv'> id='top-searched-articles'>ಪತ್ರಿಕೆಯೊಂದರಲ್ಲಿ
ಪ್ರಕಟವಾದ ಲೇಖನವನ್ನು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರತಿಭಟಿಸುವ ಬದಲು, ಮೆರವಣಿಗೆ ನೆಪದಲ್ಲಿ ಅಮಾಯಕ ಜನರ ಮೇಲೆ ಹಲ್ಲೆ ನಡೆಸಿ ಅಂಗಡಿಗಳಿಗೆ ನುಗ್ಗಿ ಲೂಟಿ ಮಾಡಿ, ವಾಹನಗಳನ್ನು ಜಖಂಗೊಳಿಸಿ, ಆಸ್ತಿ ಪಾಸ್ತಿಗಳನ್ನು ಹಾನಿ ಮಾಡಿ ಕಾನೂನು ಬಾಹಿರವಾಗಿ ಮಾರಕಾಸ್ತ್ರಗಳನ್ನು ಉಪಯೋಗಿಸಿ ಹಲ್ಲೆ ಮಾಡಿರುವುದನ್ನು ಬಜರಂಗದಳವು ಉಗ್ರವಾಗಿ ಖಂಡಿಸುತ್ತದೆ ಎಂದು ಪತ್ರಿಕಾ ಪ್ರಕಟಣೆ ಹೇಳಿದೆ.











Click it and Unblock the Notifications