ನಿತ್ಯಾನಂದನ ರಾಸಲೀಲೆ ನಡೆದಿದ್ದು ಬಿಡದಿಯಲ್ಲೇ!
ಮೈಸೂರು,
ಮಾ. 5 : ಸ್ವಾಮಿ ನಿತ್ಯಾನಂದ ಮತ್ತು ತಮಿಳುನಟಿ ಲೈಂಗಿಕ ಹಗರಣದ ದೃಶ್ಯಗಳನ್ನು ಬೆಂಗಳೂರಿನ ಬಿಡದಿ ಆಶ್ರಮದಲ್ಲೇ ರಹಸ್ಯವಾಗಿ ಚಿತ್ರೀಕರಿಸಲಾಗಿತ್ತು ಎಂಬ ಸಂಗತಿ ಇದೀಗ ಹೊರಬಿದ್ದಿದೆ. id="toptextpromo"> ತಮಿಳುನಾಡು, ಕರ್ನಾಟಕ ಸೇರಿದಂತೆ ಒಂದು ಸಾವಿರಕ್ಕೂ ಅಧಿಕಕ್ಕೂ ಆಶ್ರಮಗಳು ಮತ್ತು ವಿದೇಶದಲ್ಲಿ 13 ಶಾಖೆಗಳನ್ನು ಹೊಂದಿರುವ ನಿತ್ಯಾನಂದ ಧ್ಯಾನ ಪೀಠದ ಈ ಸ್ವಾಮೀಜಿ ಚಿತ್ರನಟಿಯೊಂದಿಗೆ ಅಸಹ್ಯಕರ ಭಂಗಿಯಲ್ಲಿರುವ ವಿಡಿಯೋ ತುಣುಕುಗಳು ಪ್ರಸಾವಾಗುತ್ತಿದ್ದಂತೆ ಎಲ್ಲ ಕಡೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ತಮಿಳು, ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದ ನಟಿಯೊಬ್ಬಳೊಂದಿಗೆ ನಿತ್ಯಾನಂದ ಸ್ವಾಮೀಜಿ ನಡೆಸಿರುವ ಸರಸ ಸಲ್ಲಾಪದ ರಹಸ್ಯ ವಿಡಿಯೋ ಕಾರ್ಯಾಚರಣೆ ಬೆಂಗಳೂರಿನ ಸಮೀಪದ ಬಿಡದಿ ಆಶ್ರಮದಲ್ಲೇ ನಡೆಸಲಾಗಿದೆ ಎಂದು ತಿಳಿದು ಬಂದಿದೆ. id='are-slot-1' class='oiad oi-axt oiadv'> id='top-searched-articles'> ನಿಖರವಾಗಿ ಯಾವಾಗ ಈ ಕಾರ್ಯಾಚರಣೆ ನಡೆಸಲಾಗಿದೆ ಎಂಬ ಮಾಹಿತಿ ಇಲ್ಲದಿದ್ದರೂ ಫೆಬ್ರವರಿ ತಿಂಗಳಲ್ಲಿ ಬಿಡದಿ ಆಶ್ರಮಕ್ಕೆ ಭೇಟಿ ನೀಡಿದ್ದ ಭಕ್ತ ತಂಡವೊಂದು ಈ ರಹಸ್ಯ ಕಾರ್ಯಾಚಾರಣೆ ಕೈಗೊಂಡಿತ್ತು ಎಂದು ತಿಳಿದು ಬಂದಿದೆ. ನಿತ್ಯಾನಂದರ ಅನುಯಾಯಿಗಳ ವೇಷದಲ್ಲಿ ತಲೆಮರೆಸಿಕೊಂಡು ಬಂದಿದ್ದ ಕೆಲವರು ಮೂರು ದಿನಗಳ ಕಾಲ ಆಶ್ರಮದಲ್ಲೇ ವಾಸ್ತವ್ಯ ಹೂಡಿ ಸ್ವಾಮೀಜಿ ಚಿತ್ರನಟಿಯ ಚೆಲ್ಲಾಟವಿರುವ 20 ನಿಮಿಷ, 5 ಸೆಕೆಂಡುಗಳ ಕಾಲದ ವಿಡಿಯೋ ಸೆರೆಹಿಡಿದಿದೆ. ಇದರ ಆಯ್ದ ತುಣುಕುಗಳನ್ನು ಮಾತ್ರ ಪ್ರಸಾರ ಮಾಡಲಾಗಿದೆ. ನಿತ್ಯಾನಂದನ ಜೊತೆಗಿರುವ ನಟಿಯೂ ಇದೀಗ ನಾಪತ್ತೆಯಾಗಿದ್ದಾಳೆ ಎಂದು ಮೂಲಗಳು ತಿಳಿಸಿವೆ.











Click it and Unblock the Notifications