ಗೋಹತ್ಯೆ ನಿಷೇಧ ಜಾರಿಯಾದರೆ ಸಿಎಂ ಔಟ್
ಸಂಡೂರು,
ಮಾ. 4 : ರಾಜ್ಯ ಸರಕಾರ ಗೋಹತ್ಯೆ ನಿಷೇಧಕ್ಕೆ ಮುಂದಾದರೆ ಅಲ್ಪಸಂಖ್ಯಾತರು ರಸ್ತೆಗಿಳಿದು ಹೋರಾಟ ನಡೆಸಬೇಕಾಗುತ್ತದೆ. ಆಗ ಕಾನೂನು ಸುವ್ಯವಸ್ಥೆ ಹಾಳಾಗಿ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕಾದ ಪ್ರಸಂಗ ಬರಬಹುದು ಎಂದು ಕರ್ನಾಟಕ ಮುಸ್ಲಿಂ ಕೌನ್ಸಿಲ್ ರಾಜ್ಯಾಧ್ಯಕ್ಷ ಬಶೀರ್ ಅಹಮದ್ ಎಚ್ಚರಿಕೆ ನೀಡಿದ್ದಾರೆ. id="toptextpromo">ಅಲ್ಪಸಂಖ್ಯಾತರು
ದನದ ಮಾಂಸ ತಿನ್ನುತ್ತಾರೆ ಎನ್ನುವ ಭ್ರಮೆ ಇದ್ದರೆ ಅದು ನಿಮ್ಮ ತಪ್ಪು ಕಲ್ಪನೆ. ಹಿಂದೂಗಳು ಮಾಂಸ ತಿನ್ನುವುದಿಲ್ಲವೇ? ಹಿಂದೂಗಳು ದನದ ಒಂದು ಕೋಮಿನ ಆಹಾರ ಪದ್ಧತಿಯನ್ನು ಗುರಿಯಾಗಿರಿಸಿಕೊಂಡು ಕಾನೂನು ರೂಪಿಸುವುದು ಎಷ್ಟು ಸರಿ. ಗೋಹತ್ಯೆ ನಿಷೇಧದ ಬಗ್ಗೆ ಸರಕಾರ ಇನ್ನೊಂದು ಸಾರಿ ಪುನರ್ ಪರಿಶೀಲನೆ ನಡೆಸಬೇಕು ಎಂದು ಬಶೀರ್ ಒತ್ತಾಯಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಶ್ರೀರಾಮಸೇನೆ
ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮುಸ್ಲಿಂ ಜನಾಂಗದ ಮೇಲೆ ಪದೇಪದೇ ಅವಹೇಳನಕಾರಿ ಮಾತನ್ನಾಡುತ್ತಿದ್ದಾರೆ. ಇದೇ ರೀತಿ ಮುತಾಲಿಕ್ ಪ್ರಚೋದನಾಕಾರಿ ಮಾತು ಮುಂದುವರಿಸಿದರೆ ಅವರ ವಿರುದ್ದ ಕೂಡ ಬೀದಿಗಿಳಿಯುವ ಪ್ರಮೇಯ ಬಂದೀತು ಎಂದು ಅವರು ಎಚ್ಚರಿಕೆ ನೀಡಿದರು.











Click it and Unblock the Notifications