ನಿತ್ಯಾನಂದನನ್ನ ಜೈಲಿಗೆ ಅಟ್ಟಿ, ಸಿದ್ದು
ಬೆಂಗಳೂರು,
ಮಾ. 4 : ಅಧ್ಯಾತ್ಮಿಕದ ಹೆಸರಿನಲ್ಲಿ ಸಾವಿರಾರು ಮಂದಿಯನ್ನು ಮೋಸ ಮಾಡುವುದಲ್ಲೇ ರಾಸಲೀಲೆಯಲ್ಲಿ ತೊಡಗಿರುವ ನಿತ್ಯಾನಂದನನ್ನು ಕೂಡಲೇ ಬಂಧಿಸಬೇಕು ಹಾಗೂ ಆತನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿಂದು ಸರಕಾರವನ್ನು ಒತ್ತಾಯಿಸಿದರು. id="toptextpromo"> ನಿತ್ಯಾನಂದ ಒಬ್ಬ ಕಾಮುಕ, ಲಫಂಗ ಸ್ವಾಮೀಜಿಯಾಗಿದ್ದು, ಇಡೀ ಸಮಾಜ ತಲೆತಗ್ಗಿಸುವಂತೆ ಕೆಲಸ ಮಾಡಿದ್ದಾನೆ. ಈ ಬಗ್ಗೆ ಸರಕಾರ ತೆಗೆದುಕೊಂಡಿರುವ ನಿಲುವು ಮತ್ತು ಕ್ರಮಗಳನ್ನು ವಿವರಿಸಬೇಕು ಎಂದು ಅವರು ಆಗ್ರಹಿಸಿದರು. ಇಂತಹ ಕಾಮುಕ ಸ್ವಾಮೀಜಿಗಳಿಂದಾಗಿ ದೇಶದ ಸಂಸ್ಕೃತಿಗೆ ಧಕ್ಕೆ ಉಂಟಾಗುತ್ತಿದೆ ಎಂದು ಕಿಡಿಕಾರಿದ ಅವರು, ಸ್ವಾಮೀಜಿಯನ್ನು ಬಂಧಿಸಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದರು. ಅಲ್ಲದೇ ಆತನ ಆಸ್ತಿ-ಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಒತ್ತಾಯಿಸಿದರು. id='are-slot-1' class='oiad oi-axt oiadv'> id='top-searched-articles'> ಸಿದ್ದರಾಮಯ್ಯ ಅವರ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ವಿಎಸ್ ಆಚಾರ್ಯ, ಸ್ವಾಮೀಜಿ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ. ರಾಮನಗರ ಸಮೀಪದ ಬಿಡದಿಯ ಆಶ್ರಮಕ್ಕೆ ಬುಧವಾರ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಸುಮಾರು 26 ಕೆಜಿ ಗಂಧದ ಕೊರಡುಗಳು ದೊರೆತಿವೆ. ಆ ನಿಟ್ಟಿನಲ್ಲಿ ಕೇಸನ್ನು ದಾಖಲಿಸಿಕೊಳ್ಳಲಾಗಿದೆ. ನಿತ್ಯಾನಂದ ಸ್ವಾಮೀಜಿ ಆಸ್ತಿ-ಪಾಸ್ತಿ ಮುಟ್ಟುಗೋಲು ಕುರಿತಂತೆ ತಮಿಳುನಾಡು ಸರ್ಕಾರದ ಜೊತೆಯೂ ನಿರಂತರ ಸಂಪರ್ಕ ಇಟ್ಟುಕೊಳ್ಳಲಾಗಿದೆ ಎಂದು ಹೇಳಿದರು.











Click it and Unblock the Notifications