ಹುಸೇನ್ ದೇಶಾಂತರಕ್ಕೆ ಗಲಾಟೆ ಏಕೆ ? ಭೈರಪ್ಪ
ಬೆಂಗಳೂರು,
ಮಾ. 4 : ಹಿಂದೂ ದೇವತೆಗಳನ್ನು ನಗ್ನವಾಗಿ ಚಿತ್ರಿಸಿದ ಎಂ ಎಫ್ ಹುಸೇನ್ ದೇಶಬಿಟ್ಟು ಹೋಗಿರುವುದಕ್ಕೆ ಗಲಾಟೆ ಎಬ್ಬಿಸುವ ಅಗತ್ಯವೇನಿಲ್ಲ ಎಂದು ಖ್ಯಾತ ಕಾದಂಬರಿಕಾರ ಎಸ್ ಎಲ್ ಭೈರಪ್ಪ ಪ್ರತಿಪಾದಿಸಿದ್ದಾರೆ. id="toptextpromo"> ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ಟಿ ಚೌಡಯ್ಯ ಸೇರಿದಂತೆ 8 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಶಯ ಭಾಷಣ ಮಾಡಿದ ಅವರು, ಹುಸೇನ್ ದೇಶ ಬಿಟ್ಟು ಹೋಗಿರುವುದು ಅಘಾತಕಾರಿಯಾಗಿದೆ. ಇಂಡಿಯಾವೇ ನಾಚಿಕೆಪಟ್ಟುಕೊಳ್ಳಬೇಕೆಂದು ಕೆಲವು ಟಿವಿ ಮಾಧ್ಯಮದವರು ಗಲಾಟೆ ಮಾಡುತ್ತಿದ್ದಾರೆ. ಕಲಾವಿದರಲ್ಲಿ ಮೌಖಿಕ ಸಂಯಮ ಇರಬೇಕೆ ವಿನಃ ಕಿಡಿಗೇಡಿತನ, ಕುಹಕ ಇರಬಾರದು ಎಂದರು. id='are-slot-1' class='oiad oi-axt oiadv'> id='top-searched-articles'> ಸೀತೆ, ಸಾವಿತ್ರಿ, ಸರಸ್ವತಿಯರ ಚಿತ್ರ ಬರೆದ ಹುಸೇನ್ ತಮ್ಮ ಧರ್ಮದ ಅಥವಾ ಗುರುಗಳ ಕುರಿತ ಒಂದೇ ಒಂದು ಚಿತ್ರ ಬರೆದಿಲ್ಲ. ಇದನ್ನು ಟೀಕಿಸಿದರೆ ಹಿಂದುತ್ವವಾದಿ, ಮೂಲಭೂತವಾದಿ ಎಂದು ಹಣೆಪಟ್ಟಿ ಕಟ್ಟುವುದಪು ಪರಂಪರೆ ವಿರೋಧಿಗಳಿಗೆ ರೂಢಿಯಾಗಿದೆ. ಭಾರತೀಯ ಪರಂಪರೆ ಕಂಡರೆ ಮಾತ್ರ ದ್ವೇಷ ಮಾಡುವವರು ಮಾತ್ರ ಹೇಳಿಕೆ, ಬಾವುಟ ಹಿಡಿದುಕೊಂಡು ಪ್ರತಿಭಟಿಸುತ್ತಾರೆ. ಅವರೇ ಹುಸೇನ್ ಅವರನ್ನು ಎತ್ತಿ ಹಿಡಿಯುತ್ತಿದ್ದಾರೆ. ದಕ್ಷಿಣ ಭಾರತದ ಇಂಗ್ಲಿಷ್ ಪತ್ರಿಕೆಯೊಂದು ಇಂತಹ ಕೆಲಸವನ್ನು ಮಾಡುತ್ತಿದೆ ಎಂದು ಅವರು ಟೀಕಿಸಿದರು.











Click it and Unblock the Notifications