ಸೇನೆ ಸಂಚಾಲಕ ಅತ್ತಾವರ್ ಬಂಧನ
ಮಂಗಳೂರು,
ಮಾ. 2 : ಭೂಗತ ಪಾತಕಿ ರವಿ ಪೂಜಾರಿ ಸಹಚರರಿಗೆ ನೆರವು ನೀಡಿದ ಆರೋಪದಲ್ಲಿ ಶ್ರೀರಾಮಸೇನೆ ರಾಜ್ಯ ಸಹ ಸಂಚಾಲಕ ಪ್ರಸಾದ್ ಅತ್ತಾವರ ಅವರನ್ನು ನಗರ ಪೊಲೀಸರು ಸೋಮವಾರ (ಮಾ1) ರಾತ್ರಿ ಬಂಧಿಸಿದ್ದಾರೆ. id="toptextpromo">ನಗರದ
ಇಬ್ಬರು ಉದ್ಯಮಿಗಳ ಹತ್ಯೆಗೆ ಸಂಚು ರೂಪಿಸಿದ್ದ ಏಳು ಮಂದಿ ರವಿ ಪೂಜಾರಿ ಸಹಚರರನ್ನು ದಕ್ಷಿಣ ಕನ್ನಡ ಅಪರಾಧ ದಳ ಪೊಲೀಸರು ಇತ್ತೀಚಿಗೆ ಬಂಧಿಸಿದ್ದರು. ಬಂಧನಕ್ಕೊಳಗಾದವರಿಗೆ ಅತ್ತಾವರ ಹಣ ಪೂರೈಸುತ್ತಿದ್ದರು. ಅತ್ತಾವರ ಎರಡು ವರ್ಷಗಳ ಹಿಂದೆ ಪಬ್ ದಾಳಿಯ ಪ್ರಧಾನ ಸೂತ್ರಧಾರಿಯೆಂದು ಗುರುತಿಸಿಕೊಂಡಿದ್ದರು ಎಂದು ಜಿಲ್ಲಾ ಪೋಲಿಸ್ ಮುಖ್ಯಸ್ಥ ಸುಬ್ರಮಣ್ಯೇಶ್ವರ ರಾವ್ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಜಿಲ್ಲೆಯ
ಪುತ್ತೂರು ತಾಲೂಕಿನ ಸರಕಾರೀ ಬಸ್ ನಿಲ್ದಾಣದ ಬಳಿ ಇರುವ ಗಾಂಧೀ ಪ್ರತಿಮೆಗೆ ಫೆ.23 ರಂದು ಚಪ್ಪಲಿ ಹಾರ ಹಾಕಿದ್ದ ಆರೋಪದ ಮೇಲೆ ಸೇನೆಯ ದಕ್ಷಿಣ ಪ್ರಾಂತ್ಯ ಸಂಚಾಲಕ ಅರುಣ್ ಪುತ್ತಿಲ ಅವರನ್ನು ಕೂಡಾ ಮಂಗಳೂರು ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆಂದು ವರದಿಯಾಗಿದೆ.











Click it and Unblock the Notifications