ಕನ್ನಡ ಪತ್ರಿಕೆಗೆ ಲೇಖನವನ್ನೇ ಬರೆದಿಲ್ಲ, ತಸ್ಲೀಮಾ

ವಿಡಿಯೋ: ಕನ್ನಡ ಪತ್ರಿಕೆಗೆ ಲೇಖನ ಬರೆದಿಲ್ಲ: ತಸ್ಲೀಮಾ
ಕನ್ನಡಪ್ರಭದ ಭಾನುವಾರದ ಸಂಚಿಕೆಯಲ್ಲಿ ಬಂದಿದ್ದ ಲೇಖನ ವಿರೋಧಿಸಿ ಹಾಸನ ಮತ್ತು ಶಿವಮೊಗ್ಗದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತಸ್ಲೀಮಾ ನೀಡಿರುವ ಸ್ಪಷ್ಟನೆ ಇದು. ಪಿಟಿಐ ವರದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬರೆದ ಲೇಖನಕ್ಕೆ ಸಂಬಂಧಿಸಿದಂತೆ ಕರ್ನಾಟಕದ ನಗರಗಳಲ್ಲಿ ಹಿಂಸಾಚಾರ ಉಂಟಾಗಿದೆ ಎಂದು ಕೇಳಿ ತಲ್ಲಣಗೊಂಡಿದ್ದೇನೆ. ಆ ಘಟನೆಗೆ ನಾನು ಬರೆದ ಲೇಖನ ಕಾರಣ ಎಂದು ಬಿಂಬಿಸಲಾಗಿದೆ. ಆದರೆ, ಕನ್ನಡ ಪತ್ರಿಕೆಯೊಂದಕ್ಕೆ ನಾನು ಈವರೆಗೊ ಯಾವುದೇ ಲೇಖನ ಬರೆದಿಲ್ಲ ಎಂದು ಅವರು ಹೇಳಿದ್ದಾರೆ.
ವಿಡಿಯೋ:ಮಾ.1ರಂದು ನಡೆದ ಹಾಸನ, ಶಿವಮೊಗ್ಗದ ಹಿಂಸೆ, ಗಲಭೆ
ಪ್ರವಾದಿ ಮೊಹ್ಮದ್ ಪೈಗಂಬರರು ಬುರ್ಖಾ ವಿರೋಧಿ ಎಂದು ಎಂದೂ ನಾನು ಬರೆದಿಲ್ಲ. ಈ ಲೇಖನಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಕೆಲವರು ನನ್ನ ಮೇಲೆ ವಿನಾಕಾರಣ ಗೂಬೆ ಕೂರಿಸುತ್ತಿದ್ದಾರೆ. ನನ್ನ ಹೆಸರು ಕೆಡಿಸುವ ಎಲ್ಲ ಪ್ರಯತ್ನವೂ ಇದರಲ್ಲಿ ನಡೆದಿದೆ ಎಂದ ತಸ್ಲೀಮಾ, ಸಾರ್ವಜನಿಕರು ಶಾಂತಿಯನ್ನು ಕಾಪಾಡಬೇಕು ಎಂದು ಮನವಿ ಮಾಡಿಕೊಂಡರು.












Click it and Unblock the Notifications