Get Updates
Get notified of breaking news, exclusive insights, and must-see stories!

ಭಾರತರತ್ನ ಕೊಟ್ಟರೆ ಬೇಡ ಎಂದೇನೇ!

Sachin Tendulkar
ಮುಂಬೈ, ಮಾ.2:ಭಾರತರತ್ನ ದೇಶದ ಅತ್ಯುನ್ನತ ನಾಗರಿಕ ಗೌರವ. ಇಂತಹ ಪ್ರಶಸ್ತಿ ಪಡೆಯಬೇಕು ಎನ್ನುವುದು ಪ್ರತಿಯೊಬ್ಬ ಭಾರತೀಯನ ಆಸೆ ಮತ್ತು ಕನಸು. ಇದಕ್ಕೆ ನಾನು ಕೂಡ ಹೊರತಲ್ಲ ಎಂದು ಕ್ರಿಕೆಟ್ ವೀರ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು 'ಸದ್ಯಕ್ಕೆ ನನಗೆ ಪ್ರಶಸ್ತಿಗಳನ್ನು ಪಡೆಯಬೇಕು ಎಂಬ ಹಂಬಲವಿಲ್ಲ. ನನ್ನದೇನಿದ್ದರೂ ಪಂದ್ಯಗಳ ಕಡೆಗೆ ಗಮನ, ಯಾವ ಪ್ರಶಸ್ತಿಗಳ ಬಗ್ಗೆ ಚಿಂತನೆ ನಡೆಸಿಲ್ಲ. ಭಾರತರತ್ನ ಪ್ರಶಸ್ತಿ ಪಡೆಯಬೇಕು ಎನ್ನುವುದು ಪ್ರತಿಯೊಬ್ಬ ಭಾರತೀಯ ಆಸೆ ಮತ್ತು ಕನಸು. ಅಂತಹ ಪ್ರತಿಷ್ಠಿತ ಪ್ರಶಸ್ತಿ ನನಗೆ ಸಿಕ್ಕರೆ ತುಂಬಾ ಖುಷಿಯಿಂದ ಪ್ರಶಸ್ತಿಯನ್ನು ಸ್ವೀಕರಿಸುವೆ' ಎಂದು ವಿವರಿಸಿದರು.

ವಿಡಿಯೋ: ಭಾರತರತ್ನ ಎಲ್ಲರ ಮಹಾನ್ ಕನಸು, ಸಚಿನ್

ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಅಜೇಯ 200 ರನ್ ಬಾರಿಸುವ ಮೂಲಕ ಏಕದಿನ ಪಂದ್ಯದ ಇತಿಹಾಸದಲ್ಲಿ ಅತ್ಯಧಿಕ ಗಳಿಸಿದ ಆಟಗಾರ ಎಂಬ ಗೌರವಕ್ಕೆ ಸಚಿನ್ ಪಾತ್ರರಾದರು. ಸಚಿನ್ ದಾಖಲೆಗೆ ಇಡೀ ಭಾರತವೇ ಸಂಭ್ರಮಪಟ್ಟಿತ್ತು. ಈ ಸಂದರ್ಭದಲ್ಲಿ ಮಹಾರಾಷ್ಟ್ರ ಸರಕಾರ ಹಾಗೂ ಶಿವಸೇನೆ ಸಚಿನ್ ಗೆ ಭಾರತರತ್ನ ನೀಡಬೇಕು ಎಂದು ಕೇಂದ್ರವನ್ನು ಆಗ್ರಹಿಸಿತ್ತು.

ಇದಕ್ಕೆ ಧ್ವನಿಗೂಡಿಸಿದ ಹಿರಿಯ ಕ್ರಿಕೆಟ್ ಆಟಗಾರರಾದ ಕಪಿಲ್ ದೇವ್, ಅಜಿತ್ ವಾಡೇಕರ್ ಮಹಾರಾಷ್ಟ್ರ ಸರಕಾರ ತೆಗೆದುಕೊಂಡ ನಿಲುವನ್ನು ಬೆಂಬಲಿಸಿತ್ತು. ದೇಶಾದ್ಯಂತ ಅನೇಕ ಸಂಘ ಸಂಸ್ಥೆಗಳು ಸಚಿನ್ ಗೆ ಭಾರತರತ್ನ ನೀಡಬೇಕು ಎಂದು ಒತ್ತಾಯಿಸಿವೆ. ಇದೇ ವೇಳೆ, ಸಚ್ಚಿನ್ ಅವರಿಗೆ ಭಾರತರತ್ನ ನೀಡಬೇಕು ಎಂಬ ಕಪಿಲ್ ದೇವ್ ಹೇಳಿಕೆಯ ದಟ್ಸ್ ಕನ್ನಡ ಸುದ್ದಿಗೆ ಮಿಶ್ರ ಪ್ರತಿಕ್ರಿಯೆಗಳು ದಾಖಲಾಗಿವೆ. ಅವು ಇಂತಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+