ಬೂಕನಕೆರೆ ಯಡಿಯೂರಪ್ಪಗೆ ಶಿವ ಒಳ್ಳೆದು ಮಾಡಲಿ!
ಬೆಂಗಳೂರು,
ಫೆ .27: ಕರ್ನಾಟಕದ ಮುಖ್ಯಮಂತ್ರಿ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರು ರೇಸ್ ಕೋರ್ಸ್ ಬಳಿ ಇರುವ ತಮ್ಮ ನಿವಾಸದಲ್ಲಿಂದು ಕೇಕ್ ಕತ್ತರಿಸುವ ಮೂಲಕ ತಮ್ಮ 68ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಕುಟುಂಬವರ್ಗದವರು, ಸಚಿವ ಸಂಪುಟದ ಸಹೋದ್ಯೋಗಿಗಳು ಹಾಗೂ ಅಪಾರ ಅಭಿಮಾನಿಗಳು ನೆರೆದಿದ್ದರು. ನಂತರ ಸಂಜಯ ನಗರದ ರಾಧಾಕೃಷ್ಣ ದೇವಾಲಯಕ್ಕೆ ಕುಟುಂಬ ವರ್ಗದವರೊಡನೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. id="toptextpromo">ಪೂಜೆ
ಸಲ್ಲಿಕೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ,"ಹುಟ್ಟುಹಬ್ಬದಂದು ದೇವಸ್ಥಾನಕ್ಕೆ ಹೋಗುವುದು ವಾಡಿಕೆ. ರಾಜ್ಯದ ಜನ ಅಧಿಕಾರ ಕೊಟ್ಟಿದ್ದಾರೆ. ಪುಣ್ಯಕೋಟಿ ನಾಡಿದು ಎಲ್ಲರೂ ಮೆಚ್ಚುವ ರೀತಿಯಲ್ಲಿ ಅಭಿವೃದ್ಧಿ ಕಾರ್ಯ ಮಾಡುವ ಶಕ್ತಿ ಕೊಡಲಿ, ಮಾ. 5 ರಂದು ಒಳ್ಳೆ ಬಜೆಟ್ ಕೊಡಲಿದ್ದೇನೆ" ಎಂದು ಹೇಳಿದರು. id='are-slot-1' class='oiad oi-axt oiadv'> id='top-searched-articles'>ಪುತ್ರ
ಬಿ.ವೈ.ರಾಘವೇಂದ್ರ, ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸೇರಿದಂತೆ ಸಚಿವ ಸಂಪುಟದ ಸಹೋದ್ಯೋಗಿಗಳು ಬೆಳಗ್ಗಿನಿಂದಲೇ ಸಿಎಂ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ರಾಜ್ಯದ ವಿವಿಧೆಡೆ ಇಂದು ಯಡಿಯೂರಪ್ಪ ಅವರ ಹುಟ್ಟುಹಬ್ಬದ ಪ್ರಯುಕ್ತ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.











Click it and Unblock the Notifications