ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಂಪೇಗೌಡ ಬಡಾವಣೆ ಅಭಿವೃದ್ಧಿಗೆ ಪೂರಕ, ಭಾರದ್ವಾಜ್

By Mrutyunjaya Kalmat
|
Google Oneindia Kannada News

 Bangalore to get five new layouts for housing sites soon Bangalore to get five new layouts for housing sites soon
ಬೆಂಗಳೂರು, ಫೆ. 26 : ನಗರದಲ್ಲಿ ಹೆಚ್ಚುತ್ತಿರುವ ವಸತಿ ಬೇಡಿಕೆಯನ್ನು ಗಮನ ದಲ್ಲಿಟ್ಟುಕೊಂಡು ನಾಡಪ್ರಭು ಕೆಂಪೇಗೌಡ ಸೇರಿದಂತೆ ಐದು ಹೊಸ ಬಡಾವಣೆ ಅಭಿವೃದ್ಧಿಗೆ ಸರಕಾರ ಮುಂದಾಗಿದೆ ಎಂದು ರಾಜ್ಯಪಾಲ ಹನ್ಸ್‌ರಾಜ್ ಭಾರದ್ವಾಜ್ ಹೇಳಿದ್ದಾರೆ.

ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಗುರುವಾರ ಮಾಡಿದ ಭಾಷಣದಲ್ಲಿ ಈ ವಿಷಯ ತಿಳಿಸಿದರು. ನೂತನ ಬಡಾವಣೆಗಳಲ್ಲಿ 1.74 ಲಕ್ಷ ಮನೆ, ನಿವೇಶನ ಹಂಚಿಕೆಗೆ ಬಿಡಿಎ ಕ್ರಮ ಕೈಗೊಳ್ಳಲಿದೆ. ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಪ್ರಕಟಿಸ ಲಾಗಿದೆ.

ಡಾ.ಶಿವರಾಮ ಕಾರಂತ ಬಡಾವಣೆ ಅಭಿವೃದ್ಧಿಗೆ ಪ್ರಾರಂಭಿಕ ಅಧಿಸೂಚನೆ ಹೊರಡಿಸಲಾಗಿದೆ. ಕೆ.ಸಿ. ರೆಡ್ಡಿ , ದೇವರಾಜ ಅರಸು ಮತ್ತು ನಿಜಲಿಂಗಪ್ಪ ಬಡಾವಣೆಗಳ ಪ್ರಾರಂಭಿಕ ಅಧಿಸೂಚನೆಯನ್ನು ಸದ್ಯದಲ್ಲೇ ಹೊರಡಿಸಲಾಗುವುದು ಎಂದರು. ಬಿಜೆಪಿ ಅಧಿಕಾರಕ್ಕೆ ಬಂದಾಗ ಶೇ.0.1 ರಷ್ಟಿದ್ದ ಮೆಟ್ರೊ ಕಾಮಗಾರಿ ಪ್ರಗತಿ ಈಗ ಶೇ.22.4 ಆಗಿದೆ.

ಬೈಯಪ್ಪನಹಳ್ಳಿಯಿಂದ ಮಹಾತ್ಮ ಗಾಂಧಿ ರಸ್ತೆವರೆಗಿನ ಕಾಮಗಾರಿ ಶೇ.70ರಷ್ಟು ಮುಗಿದಿದೆ. ಡಿ.2010ರ ವೇಳೆಗೆ ಸಂಚಾರ ಆರಂಭಿಸಲು ಉದ್ದೇಶಿಸಲಾಗಿದೆ. ಯೋಜನೆಯ ಎಲ್ಲ ಮಾರ್ಗಗಳ ನಿರ್ಮಾಣವನ್ನು ಮಾ.2013ಕ್ಕೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಬೆಂಗಳೂರಿನ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಬಿಬಿಎಂಪಿ ಮೇಲಿನ ನಿರೀಕ್ಷಿತ ವೆಚ್ಚ 2009-10ನೇ ಸಾಲಿನಲ್ಲಿ 3,000 ಕೋಟಿ ರೂ ಹಾಗೂ ಬಿಡಿಎ ವೆಚ್ಚ 145ರಿಂದ 873 ಕೋಟಿ ರೂ.ಗೆ ಏರಿಕೆಯಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಆರ್ಟೀರಿ ಯಲ್, ಉಪ ಆರ್ಟೀರಿಯಲ್ ರಸ್ತೆಗಳನ್ನು ಮೇಲ್ದರ್ಜೆಗೇರಿಸಿ, ಬಿಬಿಎಂಪಿ ವ್ಯಾಪ್ತಿಯಲ್ಲಿ 12 ಸಿಗ್ನಲ್ ಮುಕ್ತ ಕಾರಿಡಾರ್ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ ಎಂದು ವಿವರಿಸಿದರು.

ಸರಕಾರಿ ಜಮೀನಿನ ಅನಧಿಕೃತ ಒತ್ತುವರಿ ತಡೆಗೆ ಜಂಟಿ ಸದನ ಸಮಿತಿಯ ಶಿಫಾರಸುಗಳ ಅನುಷ್ಠಾನಕ್ಕೆ ಕಾರ್ಯಪಡೆಯನ್ನು ರಚಿಸಲಾಗಿದೆ. ಕಾರ್ಯಪಡೆ ಇದುವರೆಗೆ 7.39 ಲಕ್ಷ ಎಕರೆ ಒತ್ತುವರಿ ಗುರುತಿಸಿದೆ. ಸರಕಾರಿ ಆಸ್ತಿಯ ರಕ್ಷಣೆಗೆ ಸರಕಾರ ಎಲ್ಲ ಕ್ರಮ ಕೈಗೊಳ್ಳಲಿದೆ ಎಂದರು. ವಿತ್ತೀಯ ನಿರ್ವಹಣೆಯಲ್ಲಿ ಶಿಸ್ತುಬದ್ಧ ರಾಜ್ಯ ಎಂಬ ಖ್ಯಾತಿ ಗಳಿಸಿದೆ. ಯೋಜನೆ ವೆಚ್ಚ ಹೆಚ್ಚುತ್ತಿದ್ದರೂ, ರಾಜಸ್ವ ಹೆಚ್ಚಳದ ದಾಖಲೆ ಕಾಪಾಡಿಕೊಳ್ಳಲಾಗಿದೆ. ವಿತ್ತೀಯ ಹೊಣೆಗಾರಿಕೆ ಅಧಿ
ನಿಯಮದಡಿ ರೂಪಿಸಿದ ಪರಿಮಿತಿಯೊಳಗೆ ಕೊರತೆಯನ್ನು ನಿರ್ವಹಿಸಲಾಗಿದೆ. ಮುಂದೆಯೂ ಇದೇ ಶಿಸ್ತು ಕಾಯ್ದುಕೊಳ್ಳಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X