ಏಕದಿನ ಪಂದ್ಯದ ಪ್ರಪ್ರಥಮ ದ್ವಿಶತಕವೀರ ಸಚಿನ್

Sachin Tendulkar
ಗ್ವಾಲಿಯರ್, ಫೆ. 24: ಕ್ಯಾಪ್ಟನ್ ರೂಪ್ ಸಿಂಗ್ ಸ್ಟೇಡಿಯಂನಲ್ಲಿ ರನ್ ಗಳ ಸುರಿಮಳೆಗೈದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಏಕದಿನ ಪಂದ್ಯದಲ್ಲಿ ಅತ್ಯಧಿಕ ವೈಯಕ್ತಿಕ ಮೊತ್ತ ಗಳಿಸಿ(200*), ದಾಖಲೆ ಮೆರೆದರು. ದಕ್ಷಿಣ ಆಫ್ರಿಕಾ ವಿರುದ್ಧದ 2 ನೇ ಏಕದಿನ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್ ಮನ್ ಗಳು ಆಫ್ರಿಕಾದ ಬೌಲರುಗಳಿಗೆ ಸಿಂಹಸ್ವಪ್ನವಾಗಿ ಕಾಡಿದರು.

ಐವತ್ತು ಓವರುಗಳಲ್ಲಿ ಭಾರತ ಕೇವಲ ಮೂರು ವಿಕೆಟ್ ಕಳೆದುಕೊಂಡು 401 ರನ್ ಬೃಹತ್ ಮೊತ್ತ ದಾಖಲಿಸಿದೆ. ದಕ್ಷಿಣ ಆಫ್ರಿಕಾದ ಬೌಲರುಗಳನ್ನು ಮನಬಂದಂತೆ ಚಚ್ಚಿದ ಧೋನಿ ಪಡೆ ಚಿಕ್ಕ ಮೈದಾನದಲ್ಲಿ ರನ್ ಮಳೆ ಸುರಿಸಿದೆ. ಒಟ್ಟು ಮೊತ್ತದ ಅರ್ಧದಷ್ಟು ರನ್ ಬಂದಿದ್ದು ಸಚಿನ್ ಬ್ಯಾಟಿನಿಂದ. ಆಕ್ರಮಣಕಾರಿ ಆಟ ಪ್ರದರ್ಶಿಸಿದ ಸಚಿನ್ ಆಟ ಕ್ರಿಕೆಟ್ಟಿಗೆ ಅವರು ಕಾಲಿಟ್ಟ ಆರಂಭಿಕ ದಿನಗಳ ಆಟವನ್ನು ನೆನಪಿಸುವಂತಿತ್ತು.

ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿದ್ದು ಸಾರ್ಥಕವಾಯಿತು. ಆರಂಭದಲ್ಲೇ ಸೆಹ್ವಾಗ್(9 ರನ್) ಅವರ ವಿಕೆಟ್ ಕಳೆದುಕೊಂಡರೂ ಸಚಿನ್ ಜೊತೆಗೂಡಿದ ದಿನೇಶ್ ಕಾರ್ತಿಕ್ ಭಾರತ ಬೃಹತ್ ಮೊತ್ತವನ್ನು ದಾಖಲಿಸಲು ನೆರವಾದರು. ದಿನೇಶ್ ಕಾರ್ತಿಕ್ 79(85 ಎಸೆತಗಳು, 4 ಬೌಂಡರಿ, 3 ಸಿಕ್ಸರ್) ಎಂದಿನ ಶೈಲಿಯಲ್ಲಿ ಸುಲಲಿತವಾಗಿ ರನ್ ಗಳಿಸಿದರು. ಕಾರ್ತಿಕ್ ವಿಕೆಟ್ ಪತನ ನಂತರ ಯೂಸೂಫ್ ಪಠಾಣ್ 23 ಎಸೆತಗಳಲ್ಲಿ 36 ರನ್ ಗಳಿಸಿ, ಸಚಿನ್ ಗೆ ಉತ್ತಮ ಬೆಂಬಲ ನೀಡಿದರು. ಯೂಸೂಫ್ ಆಟದಲ್ಲಿ 4 ಬೌಂಡರಿ, 2 ಸಿಕ್ಸರ್ ಗಳಿದ್ದವು. ನಂತರ ಬಂದ ನಾಯಕ ಎಂಎಸ್ ಧೋನಿ ಬಿರುಸಿನ ಆಟ ಪ್ರದರ್ಶಿಸಿ ಕೇವಲ 35 ಎಸೆತಗಳಲ್ಲಿ 68 ರನ್ ಗಳಿಸಿದರು. ಅವರ ಮೊತ್ತದಲ್ಲಿ 7 ಬೌಂಡರಿ, 4 ಸಿಕ್ಸರ್ ಗಳು ಸೇರಿವೆ.

ವಿಡಿಯೋ:ವಿಶ್ವದಾಖಲೆ ಸಾಧನೆ ಮೆರೆದ ಸಚಿನ್

ಸಿಡಿಲ ಮರಿ ದ್ವಿಶತಕ: ಜಿಂಬಾಬ್ವೆಯ ಬ್ಯಾಟ್ಸ್‌ಮನ್ ಚಾರ್ಲ್ಸ್ ಕೊವೆಂಟ್ರಿಯ (ಅಜೇಯ 194) ಹೆಸರಿನಲ್ಲಿದ್ದ ಏಕದಿನ ಕ್ರಿಕೆಟ್‌ನಲ್ಲಿ ವೈಯಕ್ತಿಕ ಸರ್ವಾಧಿಕ ರನ್‌ಗಳ ದಾಖಲೆಯನ್ನು ಸಚಿನ್ ಸರ್ವನಾಶ ಮಾಡಿದರು. 200 ರನ್ ಗಳಿಸಿ ಅಜೇಯರಾಗಿ ಉಳಿದರು. ಇದಕ್ಕೂ ಮುನ್ನ ಭಾರತ ವಿರುದ್ಧ 1997 ಮೇನಲ್ಲಿ ಚೆನ್ನೈನಲ್ಲಿ ಸಯೀದ್ ಅನ್ವರ್ 194 ರನ್ ಗಳಿಸಿ ಔಟಾಗಿದ್ದರು.

ಒಂದು ಹಂತದಲ್ಲಿ ಧೋನಿ ಅವರ ಆರ್ಭಟದ ಆಟದಿಂದ ಸಚಿನ್ ದ್ವಿಶತಕ ಸಾಧನೆಯಿಂದ ವಂಚಿತರಾಗುವ ಸಾಧ್ಯತೆ ಕಂಡು ಬಂದಿತ್ತು. ಆದರೆ, ಕೊನೆಯ ಓವರ್ ನಲ್ಲಿ ಸಚಿನ್ ಸ್ಟ್ರೈಕ್ ಸಿಕ್ಕಾಗ ಒಂದು ರನ್ ಗಳಿಸಿ ಪ್ರಪ್ರಥಮ ದ್ವಿಶತಕ ಗಳಿಸಿದ ಸಾಧನೆ ಮೆರೆದರು. 147 ಎಸೆತಗಳಲ್ಲಿ ಸಚಿನ್ ಗಳಿಸಿದ ದ್ವಿಶತಕ ಮೊತ್ತದಲ್ಲಿ 25 ಬೌಂಡರಿ, 3 ಸಿಕ್ಸರ್ ಗಳಿತ್ತು ಎಂದರೆ ಅವರ ಆಟದ ತೀವ್ರತೆಯನ್ನು ಊಹಿಸಬಹುದು. ದಕ್ಷಿಣ ಆಫ್ರಿಕಾಗೆ 402 ರನ್ ಗಳ ಬೃಹತ್ ಮೊತ್ತವನ್ನು ಭಾರತ ಒಡ್ಡಿದೆ.

ಗ್ವಾಲಿಯರ್ ಪಂದ್ಯದ ನೇರ ವೀಕ್ಷಕ ವಿವರಣೆಗೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+