ಶಕ್ತಿ ಇದ್ದರೆ ನಿಮ್ಮವರನ್ನು ಹಿಡಿದಿಟ್ಟುಕೊಳ್ಳಿ, ಈಶ್ವರಪ್ಪ
ಬೆಂಗಳೂರು,
ಫೆ. 23 : ಬಿಜೆಪಿ ಶಾಸಕರನ್ನು ಮುಟ್ಟುವ ತಾಕತ್ತು ಕಾಂಗ್ರೆಸ್ ಅಥವಾ ಜನತಾದಳದವರಿಗಿಲ್ಲ. ನಮ್ಮ ಶಾಸಕರು ಒಗ್ಗಟ್ಟಾಗಿದ್ದಾರೆ. ಶಾಸಕರ ಖರೀದಿಗೆ ನಾವು ಸಿದ್ದರಿದ್ದು, ನಿಮ್ಮನಿಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ನಿಮಗಿದೆಯೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ ಎಸ್ ಈಶ್ವರಪ್ಪ ಪ್ರತಿಪಕ್ಷಗಳಿಗೆ ಸವಾಲು ಹಾಕಿದ್ದಾರೆ. id="toptextpromo">ಶಾಸಕರು
ಖರೀದಿಸುವ ವಸ್ತು ಅಲ್ಲ. ಹಿಂದೆ ಕೂಡ ನಾವು ಯಾರನ್ನೂ ಖರೀದಿ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ. ಆದರೆ ಪಕ್ಷದ ಸಿದ್ದಾಂತಗಳನ್ನು ಒಪ್ಪಿ ಬರುತ್ತೇವೆ ಎನ್ನುವವರಿಗೆ ನಮ್ಮ ಪಕ್ಷ ನಿರಾಶೆ ಮಾಡುವುದಿಲ್ಲ. ಎಲ್ಲರಿಗೂ ನಮ್ಮ ಪಕ್ಷದ ಬಾಗಿಲು ತೆರೆದಿದೆ. ನಾವು ಯಾರನ್ನೂ ಕೀಳಾಗಿ ಕಾಣುವುದಿಲ್ಲ ಸ್ವಇಚ್ಚೆಯಿಂದ ಯಾರು ಬೇಕಾದರೂ ಬರಬಹುದು ಎಂದು ಈಶ್ವರಪ್ಪ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ರಾಜ್ಯ
ಸರಕಾರದ ತೀರ್ಮಾನಗಳು ಹರಾಜಿಗಿದೆ ಎಂದು ಕುಮಾರಸ್ವಾಮಿ ಟೀಕಿಸುರುವ ಬಗ್ಗೆ ಮಾತನಾಡುತ್ತಾ, ಕಳೆದ ಲೋಕಸಭೆ ಚುನಾವಣೆಯ ಬಳಿಕೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ತನ್ನನ್ನೇ ಮಾರಾಟಕ್ಕೆ ಇಟ್ಟು ಕೊಂಡಿದ್ದ ವಿಷಯ ಗೌಪ್ಯವಾಗಿ ಉಳಿದಿಲ್ಲ ಎಂದು ಕುಮಾರಸ್ವಾಮಿ ತಿಳಿದಿರಲಿ ಎಂದು ತಿರುಗೇಟು ನೀಡಿದರು.











Click it and Unblock the Notifications