ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣಿಗಾರಿಕೆ ಅನುಮತಿಗೆ ದೇವೇಗೌಡ ತೀವ್ರ ವಿರೋಧ

By Mrutyunjaya Kalmat
|
Google Oneindia Kannada News

H D Deve Gowda
ಚಿಕ್ಕಮಗಳೂರು, ಫೆ. 22 : ರಾಜ್ಯದ ಮೂರು ಜಿಲ್ಲೆಗಳ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಸರಕಾರ ಅನುಮತಿ ನೀಡಿರುವುದನ್ನು ನೋಡಿದರೆ ಬಿಜೆಪಿಯವರಿಗೆ ಹಣದ ದಾಹ ಇಂಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭೂಬ್ಯಾಂಕ್ ವಿರುದ್ಧದ ಹೋರಾಟದ ಅಂಗವಾಗಿ ಜಿಲ್ಲೆಯ ಕಡೂರಿಗೆ ಆಗಮಿಸಿದ್ದ ದೇವೇಗೌಡ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ಭೂ ಬ್ಯಾಂಕ್ ಹೆಸರಿನಲ್ಲಿ ರಾಜ್ಯ ಸರಕಾರ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ಹೊರಟಿರುವುದನ್ನು ವಿರೋಧಿಸಿ ಮುಂದಿನ ಹೋರಾಟದ ಕುರಿತು ಫೆ 23 ರ ಬಳಿಕ ನಿರ್ಧರಿಸಲಾಗುವುದು ಎಂದರು.

ರಾಜ್ಯದ 1.71 ಲಕ್ಷ ಎಕರೆ ಭೂಮಿ ಸ್ವಾಧೀನಪಡಿಸಿಕೊಂಡು ಭೂಬ್ಯಾಂಕ್ ಮಾಡಲು ನಿರ್ಧರಿಸಲಾಗಿದೆ. ಇದರ ಹಿಂದೆ ಸ್ವಾರ್ಥ ರಾಜಕಾರಣ ಅಡಗಿದೆ. ಬಲಾಢ್ಯರ ಜಮೀನು ವಶಪಡಿಸಿಕೊಳ್ಳಲು ಹಿಂದೇಟು ಹಾಕಿ ಸಾಮಾನ್ಯ ಕೃಷಿಕರ ಭೂಮಿ ಕಿತ್ತುಕೊಳ್ಳುವ ಮೂಲಕ ಅವರನ್ನು ಬೀದಿಗೆ ತರುವ ಹುನ್ನಾರ ಅಡಗಿದೆ ಎಂದು ಟೀಕಿಸಿದರು. ಮೂರ್ನಾಲ್ಕು ಗಂಟೆಗೆ ಬೆಂಗಳೂರಿಗೆ ಪ್ರವಾಸ ಮಾಡುವ ಸಾಧ್ಯತೆ ಇರುವ ದಾವಣಗೆರೆಗೆ ವಿಮಾನ ನಿಲ್ದಾಣ ಸ್ಥಾಪನೆಯ ಅಗತ್ಯ ಇದೆಯೇ ಎಂದು ದೇವೇಗೌಡ ಪ್ರಶ್ನಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X