ಕುಲಾಂತರಿ ಆಹಾರ ಭಾರಿ ಅಪಾಯಕಾರಿ; ಶಿವಚೋಪ್ರಾ
ಬೆಂಗಳೂರು,
ಫೆ. 22 : ಕುಲಾಂತರಿ ಆಹಾರಗಳಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಿಂದ ಸ್ಥಳೀಯ ಆಹಾರಗಳ ಉತ್ಪಾದಕತೆ ಹೆಚ್ಚಿಸುವ ಕಡೆ ಗಮನ ಹರಿಸಬೇಕಾಗಿದೆ ಎಂದು ಕೆನಡಾದ ಅಂತಾರಾಷ್ಟ್ರೀಯ ಮನ್ನಣೆ ಪಡೆದ ವಿಜ್ಞಾನಿ ಡಾ ಶಿವಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ. id="toptextpromo">ಭಾರತೀಯ
ಸಾವಯುವ ಬೇಸಾಯ ಸಂಘಟನೆಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಕುಲಾಂತರಿ ಆಹಾರಗಳ ಹಿಂದಿನ ರಾಜಕೀಯ ಮತ್ತು ಆರೋಗ್ಯದ ಮೇಲಿನ ದುಷ್ಪರಿಣಾಮ ಕುರಿತು ಅವರು ಉಪನ್ಯಾಸ ನೀಡುತ್ತಿದ್ದರು. ಕೃಷಿ ವಿಷಯವನ್ನು ಶಾಲೆಗಳಿಂದಲೇ ಪಠ್ಯದಲ್ಲಿ ಸೇರಿಸುವ ಮೂಲಕ ಕುಲಾಂತರಿ ತಳಿಗಳ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಕುಲಾಂತರಿ ಆಹಾರ ಬರುವುದರ ಹಿಂದೆ ಸಾಕಷ್ಟು ರಾಜಕೀಯ ಮತ್ತು ಭ್ರಷ್ಟಾಚಾರವಿದೆ. ಬಹುರಾಷ್ಟ್ರೀಯ ಕಂಪನಿಗಳ ಜೊತೆ ರಸಾಯನಿಕ ಕಂಪನಿಗಳು ಸೇರಿಕೊಂಡಿವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. id='are-slot-1' class='oiad oi-axt oiadv'> id='top-searched-articles'>ಭಾರತ
ಮತ್ತು ಚೀನಾ ಕುಲಾಂತರಿ ಆಹಾರಗಳಿಗೆ ಮಾರುಕಟ್ಟೆಯಾಗಿವೆ. ಜನರ ಆರೋಗ್ಯದ ಮೇಲೆ ಆಗುವ ಪರಿಣಾಮವನ್ನು ಇಲ್ಲಿ ಸರಕಾರಗಳು ಗಮನಿಸುತ್ತಿಲ್ಲ. ಬಿಟಿ ಬದನೆಯಿಂದ ಆಗುವ ಅಪಾಯಗಳನ್ನು ಕೃಷಿ ಸಚಿವರು ಸಹ ಗಣನೆಗೆ ತೆಗೆದುಕೊಳ್ಳದೇ ಹೋಗಿದ್ದಾರೆ ಎಂದು ಶಿವಚೋಪ್ರಾ ಕಿಡಿಕಾರಿದರು.











Click it and Unblock the Notifications