ನಾಗತಿ ಪಿಯುಸಿ ಸೈನ್ಸ್ ನಲ್ಲಿ ಫೇಲ್

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡ ಭವನದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಮನೆಯೆಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಬಾಗವಹಿಸಿ ಮಾತನಾಡುತ್ತಿದ್ದರು. ಸಿನಿಮಾ ಉದ್ಯಮ ಸಾಹಿತ್ಯದಷ್ಟು ಸರಳವಾಗಿಲ್ಲ ಎಂದರು. ದೊಡ್ಡ ಪ್ರಮಾಣದಲ್ಲಿ ಬಂಡವಾಳ ಇದ್ದರೆ ಮಾತ್ರ ಸಿನಿಮಾ ಮಾಡಲು ಸಾಧ್ಯ. ಅಲ್ಲದೆ ಇದರಲ್ಲಿ ಪರಾವಲಂಬನೆ ಹೆಚ್ಚಿರುತ್ತದೆ. ಎಲ್ಲವೂ ಮಾರುಕಟ್ಟೆ ಆಧರಿಸುತ್ತದೆ. ಆದರೆ, ಸಾಹಿತ್ಯ ರಚನೆ ಇಷ್ಟು ಕಷ್ಟವಿರುವುದಿಲ್ಲ ಎಂದು ಅವರು ಹೇಳಿದರು.
ನಮ್ಮೂರ ಶಾಲೆ, ಪರಿಸರ, ಶಿಕ್ಷಮ ಸಮುದಾಯವೇ ನನ್ನ ಬದುಕಿಗೆ ಅನುಭವದ ಗಣಿ. ಹೀಗಾಗಿ ನನಗೆ ಕಟ್ಟಕಡೆಯ ಪ್ರಯೋಗಶಾಲೆ ಅದೇ ನನ್ನ ಹಳ್ಳಿ. ಶಾಲೆ ಅನುಭವ, ಬಡತನ, ಏಕಾಂಗಿತನ ಏನನ್ನೋ ಹೇಳುವ ಹಂಬಲ ಸಾಹಿತ್ಯದತ್ತ ಅಭಿರುಚಿ ಬೆಳೆಸಿತು. ಮೈಸೂರು ವಿವಿಯಲ್ಲಿ ಓದುತ್ತಿದ್ದಾಗ ಶುರು ಮಾಡಿದ್ದ ರೈತ ಚಳವಳಿ ಹಾಗೂ ಪರಿಸರದ ಹೋರಾಟ ವ್ಯಕ್ತಿತ್ವವನ್ನು ಗಟ್ಟಿಗೊಳಿಸಲು ಕಾರಣವಾಯಿತು.
ಪ್ರೋ. ನಂಡುಂಡಸ್ವಾಮಿ, ಶಿವರಾಮ ಕಾರಂತರಂತರ ಹಿರಿಯರ ಹೋರಾಟದಲ್ಲಿ ಕಿಂದರ ಜೋಗಿ ತರಹ ಭಾಗವಹಿಸುತ್ತಿದ್ದೆ. ಮುಂದೆ ಅದೇ ಸಾಹಿತ್ಯದ ಗೀಳು, ಹೋರಾಟದ ಮನೋಭಾವ ಸಿನಿಮಾದಡೆಗೆ ಪುಟ್ಟ ಗೂಡು ಕಟ್ಟಿಕೊಂಡೆ. ಅದು ನಂತರದ ದಿನಗಳಲ್ಲಿ ನನ್ನ ಅರ್ಹತೆಯನ್ನು ಮೀರಿದ ಬದುಕು ಕಟ್ಟಿಕೊಟ್ಟಿತು ಎಂದು ನಾಗತಿಹಳ್ಳಿ ವಿವರಿಸಿದರು.











Click it and Unblock the Notifications