ಬಂಗಾರಪ್ಪ, ದೇವೇಗೌಡರದು ದುಷ್ಟಕೂಟ, ಸಿಎಂ
ಬೆಂಗಳೂರು,
ಫೆ.21: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರು ರಾಜ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಮಾರಕವಾಗಿದ್ದಾರೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ದೂಷಿಸಿದ್ದಾರೆ. id="toptextpromo"> ದಂಡಾವತಿ ನೀರಾವರಿ ಯೋಜನೆ ತಡೆಯಲು ಸಾಧ್ಯವಿಲ್ಲ, ಸರ್ಕಾರ ಯೋಜನೆಯನ್ನು ಕೈಬಿಡುವ ಮಾತೇ ಇಲ್ಲ ಎಂದ ಯಡಿಯೂರಪ್ಪನವರು, ಬಿಜೆಪಿ ಸರ್ಕಾರದ ಸಾಧನೆ ಕಂಡು ಸಹಿಸಿದ ದುಷ್ಟಕೂಟಗಳು ಆಡುವ ಆಟಕ್ಕೆ ನಾವು ತಲೆಬಾಗುವುದಿಲ್ಲ ಎಂದರು.ಈ ನೀರಾವರಿ ಯೋಜನೆ ರೈತರಿಗೆ ಅನುಕೂಲಕರವಾಗಿ ರೂಪಿತವಾಗಿದೆ. ದೇವೇಗೌಡ ಹಾಗೂ ಬಂಗಾರಪ್ಪ ಅವರ ಹೋರಾಟಕ್ಕೆ ಸರ್ಕಾರ ಮಣಿಯುವುದಿಲ್ಲ ಎಂದು ಹೇಳಿದರು. id='are-slot-1' class='oiad oi-axt oiadv'> id='top-searched-articles'> ದಂಡಾವತಿ ಯೋಜನೆಯಲ್ಲಿನ ಅಲ್ಪ ಸ್ವಲ್ಪ ಲೋಪ ದೋಷಗಳನ್ನು ಸರಿಪಡಿಸಿಕೊಳ್ಳಲು ಹಿರಿಯರಾದ ಈ ಇಬ್ಬರು ನಾಯಕರು ಸಲಹೆ ಸೂಚನೆಗಳನ್ನು ನೀಡಿದರೆ ಸ್ವಾಗತಿಸುತ್ತೇನೆ. ಆದರೆ, ಯೋಜನೆ ಕೈಬಿಡಲು ಸಾಧ್ಯವಿಲ್ಲ ಎಂದು ಯಡಿಯೂರಪ್ಪ ಹೇಳಿದರು.











Click it and Unblock the Notifications