ನಿತಿನ್ ಗಡ್ಕರಿ ವಿರುದ್ಧ ಗರ್ಜಿಸಿದ ಬಾಳ ಠಾಕ್ರೆ
ಮುಂಬೈ,
ಫೆ.20: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಮುಸ್ಲಿಂರು ಸಹಕರಿಸಬೇಕು ಎಂದು ಹೇಳಿಕೆ ನೀಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ವಿರುದ್ಧ ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ಗರ್ಜಿಸಿದ್ದಾರೆ. ಹಾಗೆ ಮಾಡಿದರೆ ಹುತಾತ್ಮರಾದ ಅಯೋಧ್ಯೆಯ ಕರಸೇವಕರಿಗೆ ಅವಮಾನ ಮಾಡಿದಂತೆ ಎಂದು ಠಾಕ್ರೆ ಪ್ರತಿಕ್ರಿಯಿಸಿದ್ದಾರೆ. id="toptextpromo">ಶಿವಸೇನೆಯ
ಮುಖವಾಣಿ ಸಾಮ್ನಾದಲ್ಲಿ ಠಾಕ್ರೆ ಬರೆಯುತ್ತಾ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮುಸ್ಲಿಂರು ಸಹಕರಿಸಬೇಕು ಎಂದು ಹೇಳುವ ಮೂಲಕ ಗಡ್ಕರಿ ಅವರು ರಾಮಮಂದಿರ ಗಲಭೆಯಲ್ಲಿ ಹುತಾತ್ಮರಾದ ಸಾವಿರಾರು ಮಂದಿ ಕರಸೇವಕರಿಗೆ ಅಪಮಾನ ಮಾಡಿದ್ದಾರೆ ಎಂದು ಜರಿದಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಹಿಂದುತ್ವ
ಸಿದ್ಧಾಂತವನ್ನು ಬಿಜೆಪಿ ಬಿಡಬಾರದು ಎಂದು ಆಗ್ರಹಿಸಿರುವ ಠಾಕ್ರೆ, ಜಾಮಾ ಮಸೀದಿಯ ಇಮಾನ್ ಕಾಲಿಗೆ ಎರಗಿ ರಾಮಮಂದಿರಕ್ಕಾಗಿ ಸ್ಥಳಪಡೆಯುವುದು ಸುಲಭ. ಆದರೆ ಹಿಂದುಗಳು ರಾಮಮಂದಿರಕ್ಕಾಗಿ ರಕ್ತಪಾತ ಹರಿಸಿದ್ದನ್ನು ಮರೆಯಬಾರದು ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ಠಾಕ್ರೆ ಅವರ ಹೇಳಿಕೆ ಬಿಜೆಪಿ ಮಿತ್ರಕೂಟದಲ್ಲಿ ಮತ್ತಷ್ಟು ಬಿಕ್ಕಟ್ಟಿಗೆ ಕಾರಣವಾಗುವ ಸಾಧ್ಯತೆಯಿದೆ.











Click it and Unblock the Notifications