ಹೆಗಡೆ ವಿರುದ್ಧ ಗೆಲುವು ಸಾಧಿಸಿದ್ದ ಕದಂ ನಿಧನ
ಕಾರವಾರ,
ಫೆ.20: ಕೆನರಾ ಕ್ಷೇತ್ರದ ಮಾಜಿ ಸಂಸದ ಹಾಗೂ ಮಾಜಿ ಉಪಸಭಾಪತಿ ಬಿ ಪಿ ಕದಂ(93) ಅವರು ಗುರುವಾರ ರಾತ್ರಿ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾದರು. ಕದಂ ಅವರು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. id="toptextpromo">ಮಾಜಿ
ಸಚಿವ ಪ್ರಭಾಕರ ರಾಣೆ, ಮೀನುಗಾರಿಕೆ ಸಚಿವ ಆನಂದ್ ಆಸ್ನೋಟಿಕರ್, ಬಿಜೆಪಿಯ ಎಸ್ ಆರ್ ಪಿಕ್ನೆ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಪ್ರಸಾದ್ ಕಾರವಾರಕರ್ ಸೇರಿದಂತೆ ಅನೇಕರು ಕದಂ ಅವರಿಗೆ ಅಂತಿಯ ನಮನ ಸಲ್ಲಿಸಿದರು. id='are-slot-1' class='oiad oi-axt oiadv'> id='top-searched-articles'>ಕೊಲ್ಲಾಪುರದಲ್ಲಿ
ಪದವಿ ಮುಗಿಸಿ ವಕೀಲಿ ವೃತ್ತಿ ಪ್ರಾರಂಭಿಸಿದ ಬಾಳ್ಸು ಪುರ್ಸು ಕದಂ, 1952ರಲ್ಲಿ ಎಂಇಎಸ್ ನಿಂದ ಸ್ಪರ್ಧಿಸಿ ಶಾಸಕರಾಗಿದ್ದರು. ಆ ಬಳಿಕ 1962, 1967ರಲ್ಲಿ ಎರಡು ಬಾರಿ ಶಾಸಕರಾಗಿದ್ದರು. 1977ರಲ್ಲಿ ಕೆನರಾ ಕ್ಷೇತ್ರಕ್ಕೆ ನಡೆದ ಲೋಕಸಭೆ ಚುನಾವಣೆಯಲ್ಲಿ ರಾಮಕೃಷ್ಣ ಹೆಗಡೆ ಅವರನ್ನು ಸೋಲಿಸಿ ಕದಂ ಭಾರಿ ಸುದ್ದಿ ಮಾಡಿದ್ದರು.











Click it and Unblock the Notifications