ಸಿಎಂ ಅವರಿಂದ ದಲಿತರಿಗೆ ಅನ್ಯಾಯ, ಜಿಗಜಿಣಗಿ
ಬಿಜಾಪುರ,
ಫೆ.19 : ಮುಖ್ಯಮಂತ್ರಿ ಯಡಿಯೂರಪ್ಪ ದಲಿತ ವರ್ಗಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಸಂಸದ ರಮೇಶ್ ಜಿಗಜಿಣಗಿ ಆರೋಪಿಸಿದ್ದಾರೆ. ಪಕ್ಷದಲ್ಲಿ ದಲಿತರಿಗೆ ಸೂಕ್ತ ಅವಕಾಶ ನೀಡದೆ ಬಹಳ ಅನ್ಯಾಯ ಮಾಡಲಾಗಿದೆ ಎಂದು ಅವರು ಕಿಡಿಕಾರಿದರು. id="toptextpromo">ಮಾಧ್ಯಮ
ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ನಿಗಮ ಮಂಡಳಿಯಲ್ಲಿ ದಲಿತರಿಗೆ ಸೂಕ್ತ ಸ್ಥಾನಮಾನಗಳನ್ನು ನೀಡಿದೆ ತಾರತಮ್ಯ ನೀತಿಯನ್ನು ಮುಂದುರಿಸಿಕೊಂಡು ಬರುತ್ತಿದ್ದಾರೆ. ದಲಿತರಿಗೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಹಲವಾರು ಬಾರಿ ಮನವಿ ಮಾಡಿ ಗಮನಕ್ಕೆ ತಂದರೂ ತಮ್ಮ ವರ್ತನೆಯನ್ನು ತಿದ್ದುಕೊಳ್ಳದೆ ಅನ್ಯಾಯವನ್ನೇ ಮುಂದುವರಿಸಿದ್ದಾರೆ. ಇದೇ ರೀತಿ ಮುಂದುವರಿಸಿದರೆ ದಲಿತರು ಬಿಜೆಪಿಯಿಂದ ದೂರ ಸರಿಯುವ ಅಪಾಯವಿದೆ ಎಂದು ಜಿಗಜಿಣಗಿ ಎಚ್ಚರಿಕೆ ನೀಡಿದರು. id='are-slot-1' class='oiad oi-axt oiadv'> id='top-searched-articles'>ಇನ್ನು
ಮುಂದಾದರೂ ಮುಖ್ಯಮಂತ್ರಿಗಳು ತಮ್ಮ ನಡವಳಿಕೆಯನ್ನು ಬದಲಾವಣೆ ಮಾಡಿಕೊಂಡು ದಲಿತ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸದಿದ್ದರೆ ದೊಡ್ಡ ಪಾಠ ಕಲಿಯಬೇಕಾಗುತ್ತದೆ ಎಂದು ಅವರು ಹೇಳಿದರು.











Click it and Unblock the Notifications