ಕಾಂಗ್ರೆಸ್ಸಿಗ ಸಜ್ಜನ್ ಕುಮಾರ್ ಬಂಧನ ಸಾಧ್ಯತೆ
ನವದೆಹಲಿ,
ಫೆ. 17 : ಸಿಖ್ ಹತ್ಯಾಕಾಂಡದ ಪ್ರಮುಖ ಆರೋಪ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಸಜ್ಜನ್ ಕುಮಾರ್ ಅವರ ವಿರುದ್ದ ದೆಹಲಿ ಹೈಕೋರ್ಟ್ ಜಾಮೀನು ರಹಿತ ವಾರೆಂಟ್ ಹೊರಡಿಸಿದ್ದು ಸಂಜೆ ವೇಳೆಗೆ ಅವರನ್ನು ಬಂಧಿಸುವ ಎಲ್ಲ ಸಾಧ್ಯತೆಗಳೂ ಇವೆ. id="toptextpromo">ಸಿಖ್
ವ್ಯಕ್ತಿಗಳಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಸಿಖ್ ಸಮುದಾಯ ವ್ಯಕ್ತಿಗಳನ್ನು ಕಂಡಕಂಡಲ್ಲಿ ಹತ್ಯೆ ಮಾಡಲಾಯಿತು. ಈ ಹತ್ಯೆಗೆ ಸಜ್ಜನ್ ಕುಮಾರ್ ಅವರು ಪ್ರಚೋದನೆ ನೀಡಿದರು ಎಂಬ ಆರೋಪ ಅವರ ಮೇಲಿದೆ. 1984 ರಲ್ಲಿ ನಡೆದ ಹತ್ಯಾಕಾಂಡದಲ್ಲಿ ಸುಮಾರು 3000 ಅಮಾಯಕ ಸಿಖ್ ಜನರು ಪ್ರಾಣ ಕಳೆದುಕೊಂಡರು. id='are-slot-1' class='oiad oi-axt oiadv'> id='top-searched-articles'>ಸಿಖ್
ಹತ್ಯಾಕಾಂಡದಲ್ಲಿ ಆರೋಪಿಯಾಗಿರುವ ಸಜ್ಜನ್ ಕುಮಾರ್ ಜಾಮೀನು ಕೋರಿ ಸಿಬಿಐ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿ ತಿರಸ್ಕರಿಸಿ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ. ಸಂಜೆ ಹೊತ್ತಿಗೆ ಸಜ್ಜನ್ ಕುಮಾರ್ ಅವರನ್ನು ಬಂಧಿಸುವ ಸಾಧ್ಯತೆ ದಟ್ಟವಾಗಿದೆ. ಸಜ್ಜನ್ ಕುಮಾರ್ ವಿರುದ್ಧ ಸಿಬಿಐ ದೋಷಾರೂಪ ಪಟ್ಟಿ ಸಲ್ಲಿಸಿತ್ತು.











Click it and Unblock the Notifications