ರವಿ ಪೂಜಾರಿ ಏಳು ಸಹಚರರು ಬಂಧನ
ಮಂಗಳೂರು,
ಫೆ. 17 : ಭೂಗತದೊರೆ ರವಿ ಪೂಜಾರಿಯ ಏಳು ಸಹಚರರನ್ನು ಬಂಧಿಸಿರುವ ಮಂಗಳೂರು ಕ್ರೈಂ ಬ್ರಾಂಚ್ ಪೊಲೀಸರು ಆರೋಪಿಗಳನ್ನು ನಾಲ್ಕು ರಿವಾಲ್ವರ್, 52 ಸಾವಿರ ರುಪಾಯಿ ನಗದು, ಎರಡು ಕಾರು, ಎರಡು ಬೈಕು ಹಾಗೂ ಎಂಟು ಮೊಬೈಲ್ ಮತ್ತು ಗಳನ್ನು ವಶಪಡಿಸಿಕೊಂಡಿದ್ದಾರೆ. id="toptextpromo">ಘಟನೆಗೆ
ಸಂಬಂಧಿಸಿದಂತೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಉತ್ತರ ವಲಯ ಐಜಿಪಿ ಗೋಪಾಲ್ ಹೊಸೂರು, ಭೂಗತದೊರೆ ರವಿ ಪೂಜಾರಿ ಸಹಚರರು ಎನ್ನಲಾಗಿರುವ ಆರೋಪಿಗಳು ಇತ್ತೀಚೆಗೆ ನಗರದ ಉಧ್ಯಮಿದಾರರಿಗೆ ಕರೆ ಮಾಡಿ 5 ಕೋಟಿ ರುಪಾಯಿಗಳನ್ನು ನೀಡುವಂತೆ ಬೆದರಿಕೆ ಹಾಕಿದ್ದರು. ಹಣ ನೀಡಿದಿದ್ದರೆ, ಒಂದು ವಾರದೊಳಗೆ ಕೊಲೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. id='are-slot-1' class='oiad oi-axt oiadv'> id='top-searched-articles'>ಈ
ಹಿನ್ನೆಲೆಯಲ್ಲಿ ಉದ್ಯಮಿದಾರರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರಿಂದ ಆರೋಪಿಗಳಿಗೆ ವ್ಯಾಪಕ ಜಾಲ ಬೀಸಲಾಯಿತು. ಹಣ ನೀಡುವೆ ಮನೆಗೆ ಬನ್ನಿ ಎಂದು ನಾಟಕವಾಡುವ ಮೂಲಕ ಆರೋಪಿಗಳನ್ನು ಬಂಧಿಸಲಾಯಿತು. ಪ್ರಶಾಂತ್ ಶೆಟ್ಟಿ, ಸತೀಶ್ ಶೆಟ್ಟಿ, ಸುಧೀರ್ ಪೂಜಾರಿ, ಯತೀಶ್ ಶೆಟ್ಟಿ, ಅಮರ್, ಪ್ರವೀಣ್ ಕಾರ್ಲೂ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೊಸೂರು ವಿವರಿಸಿದರು.











Click it and Unblock the Notifications