ಬಿಐಎಎಲ್ ಜಟ್ಕಾ ನಿಲ್ದಾಣದಂತಿದೆ, ಹೈಕೋರ್ಟ್
ಬೆಂಗಳೂರು,
ಫೆ. 17 : ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(BIA) ಕಳಪೆ ಗುಣಮಟ್ಟಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಇದೇನು ವಿಮಾನ ನಿಲ್ದಾಣವೂ ಇಲ್ಲವೇ ಜಟ್ಕಾ ನಿಲ್ದಾಣವೂ ಎಂದು ಕಿಡಿಕಾರಿದೆ. id="toptextpromo">ಬಿಐಎಎಲ್
ನ ಮೂಲಭೂತ ಸೌಕರ್ಯಗಳ ಕೊರತೆಗೆ ವಿಷಾಧ ವ್ಯಕ್ತಪಡಿಸಿದ ನ್ಯಾಯಾಲಯ, ವಿಶಾಲವಾದ ಜಾಗವಿದ್ದರೂ ಬೆಂಕಿ ಪೊಟ್ಟಣದ ಹಾಗೆ ನಿಲ್ದಾಣ ನಿರ್ಮಿಸಲಾಗಿದೆ. ಇದರಿಂದ ಜನರಿಗೆ ಸಮಸ್ಯೆ ಉಂಟಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಬಿಐಎಎಲ್ ಆರಂಭವಾದ ನಂತರ ಎಚ್ಎಎಲ್ ವಿಮಾನ ನಿಲ್ದಾಣ ಮುಚ್ಚದಂತೆ ಆದೇಶಿಸಲು ಕೋರಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ವಿ ಜಿ ಸಭಾಹಿತ ಹಾಗೂ ಎಸ್ ಎನ್ ಸತ್ಯ ನಾರಾಯಣ ಅವರನ್ನು ಒಳಗೊಂಡ ಪೀಠ ಈ ಅಭಿಪ್ರಾಯವ್ಯಕ್ತಪಡಿಸಿದೆ. id='are-slot-1' class='oiad oi-axt oiadv'> id='top-searched-articles'>ಇಲ್ಲಿಯ
ಪರಿಸ್ಥಿತಿಯ ಬಗ್ಗೆ ಅರ್ಜಿದಾರರು ಫೋಟೋಗಳನ್ನು ತೋರಿಸಲು ಮುಂದಾದಾಗ ಅದರ ಅಗತ್ಯವಿಲ್ಲ, ಎರಡು ವರ್ಷಗಳಿಂದ ಈ ನಿಲ್ದಾಣವನ್ನು ನೋಡುತ್ತಿದ್ದೇವೆ. ಇಲ್ಲಿ ವಿಮಾನ ಭೂಸ್ಪರ್ಷ ಮಾಡುವಾಗ ಅಗತ್ಯ ಸೌಕರ್ಯಗಳು ಸರಿಯಾದ ರೀತಿಯಲ್ಲಿ ಇಲ್ಲ. ಇಲ್ಲಿಯ ಸೌಕರ್ಯಗಳು ಉತ್ತಮ ಗುಣಮಟ್ಟ ಹೊಂದಿಲ್ಲ. ಬೇರೆ ವಿಮಾನ ನಿಲ್ದಾಣಗಳಂತೆ ಪರ್ಯಾಯ ರನವೇ ಇಲ್ಲಿಲ್ಲ ಎಂದು ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದರು.











Click it and Unblock the Notifications