ಅದಿರು ಲಾರಿ ಮಾಲೀಕರೊಂದಿಗೆ ಚರ್ಚೆ, ಅಶೋಕ್
ಹುಬ್ಬಳ್ಳಿ,
ಫೆ. 16 : ಕಬ್ಬಿಣ ಅದಿರು ಸಾಗಿಸುತ್ತಿರುವ ಲಾರಿಗಳಿಂದ ಆಗುತ್ತಿರುವ ಪರಿಸರ ಹಾನಿಗೆ ಸಂಬಂಧಿಸಿದಂತೆ ಶೀಘ್ರದಲ್ಲಿ ಆಯಾ ಇಲಾಖೆ ಅಧಿಕಾರಿಗಳು ಹಾಗೂ ಲಾರಿಗಳ ಮಾಲೀಕರೊಂದಿಗೆ ಸಭೆ ನಡೆಸಲಾಗುವುದು ಎಂದು ಸಾರಿಗೆ ಸಚಿವ ಆರ್ ಅಶೋಕ್ ಹೇಳಿದರು. id="toptextpromo">ನಗರದಲ್ಲಿ
ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡುತ್ತಿದ್ದರು ಬಳ್ಳಾರಿಯಿಂದ ಕಾರವಾರದವರೆಗೆ ನಿತ್ಯ ಸಾವಿರಾರು ಲಾರಿಗಳು ಅದಿರು ತುಂಬಿಕೊಂಡು ಸಂಚರಿಸುತ್ತವೆ. ಈ ಲಾರಿಗಳಿಂದ ಪರಿಸರಕ್ಕೆ ಭಾರಿ ಹಾನಿಯುಂಟಾಗುತ್ತದೆ ಎಂಬುದು ಮಾರ್ಗ ಮಧ್ಯ ಬರುವ ಎಲ್ಲ ಗ್ರಾಮ ಮತ್ತು ಪಟ್ಟಣಗಳ ಜನರ ಆರೋಪವಾಗಿದೆ. ಅದಿರು ಲಾರಿಗಳ ಮಾಲೀಕರ ಅನೇಕ ರೀತಿಯಲ್ಲಿ ಕಿರುಕುಳ ಎದುರಿಸುತ್ತಿರುವುದು ತಿಳಿದಿರುವ ಸಂಗತಿ. ಅ ಎಲ್ಲ ಸಮಸ್ಯೆಗಳ ಚರ್ಚೆಗೆ ಶೀಘ್ರದಲ್ಲಿ ಸಭೆ ಕರೆಯಲಾಗುವುದು ಎಂದು ಅಶೋಕ್ ವಿವರಿಸಿದರು. id='are-slot-1' class='oiad oi-axt oiadv'> id='top-searched-articles'>ಪೊಲೀಸ್,
ಅರಣ್ಯ, ಸಾರಿಗೆ, ಪರಿಸರ ಇಲಾಖೆ ಮತ್ತು ಲಾರಿ ಮಾಲೀಕರೊಂದಿಗೆ ಚರ್ಚೆ ನಡೆಸಲಾಗುವುದು. ಬಳ್ಳಾರಿ, ಕೊಪ್ಪಳ, ಧಾರವಾಡ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಹಿರಿಯ ಅಧಿಕಾರಿಗಳು ಹಾಗೂ ಅದಿರು ಲಾರಿಗಳ ಸಂಘವೂ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅಶೋಕ್ ಹೇಳಿದರು.











Click it and Unblock the Notifications