ಕಾಂಗ್ರೆಸ್ ನಾಯಕರೆಲ್ಲರೂ ಷಂಡರು

ನೈಸ್ ಕಂಪನಿಯ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ರೈತ ಸಂಘ ಹಾಗೂ ಜೆಡಿಎಸ್ ಜಂಟಿಯಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಮ್ಮಿಗೆಪುರ ಗ್ರಾಮದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೈಸ್ ಹಗರಣದಲ್ಲಿ ಕಾಂಗ್ರೆಸ್ ಪಕ್ಷದ ಪಾಲೂ ಇದೆ ಎಂದು ಆರೋಪಿಸಿದರು. ನೈಸ್ ಕಂಪನಿ ದೇಶದ ಅತಿ ದೊಡ್ಡ ಮೋಸದ ಕಂಪನಿಯಾಗಿದ್ದು, ಅದರ ಮಾಲೀಕ ಅಶೋಕ್ ಖೇಣಿ ಎಂಬ ದೂರ್ತ ಅಸಹಾಯಕ ರೈತರ ಭೂಮಿಯನ್ನು ಕಸಿದುಕೊಳ್ಳುತ್ತಿದ್ದಾನೆ. ಯಾವ ಕಾರಣಕ್ಕೂ ರೈತರ ಭೂಮಿ ವಶಪಡಿಸಿಕೊಳ್ಳಲು ಬಿಡುವುದಿಲ್ಲ ಎಂದು ರೆಡ್ಡಿ ಹೇಳಿದರು.
ನೈಸ್ ಕಂಪನಿ ರೈತ ವಿರೋಧಿಯಾಗಲು ಕಾಂಗ್ರೆಸ್ ಪಕ್ಷ ಕಾರಣ. ಎಸ್ ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಬಹುದೊಡ್ಡ ಅನ್ಯಾಯವನ್ನು ಮಾಡಿತು. ಅಶೋಕ್ ಖೇಣಿಗೆ ಐಸಿಐಸಿಐ ಬ್ಯಾಂಕ್ ನಿಂದ 150 ಸಾಲ ಕೊಡಿಸಲು ಕೃಷ್ಣ ಸರಕಾರ ಜಾಮೀನು ನೀಡಿದ್ದು ಅತ್ಯಂತ ನೀಚ, ಘನಘೋರ ಅನ್ಯಾಯ. ಅಂದು ತಪ್ಪು ಮಾಡಿದ ಕಾಂಗ್ರೆಸ್ ಇಂದು ಖಮಕ್ ಖಿಮಕ್ ಎನ್ನುತ್ತಿಲ್ಲ ಏಕೆ ಎಂದು ರೆಡ್ಡಿ ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ನಾಯಕರಿಲ್ಲ. ದೇಶಪಾಂಡೆ ಮಾತನ್ನು ಯಾರೂ ಕೇಳುತ್ತಿಲ್ಲ. ಸಿದ್ದರಾಮಯ್ಯ ಕನಸು ಕಾಣುತ್ತಿದ್ದಾರೆ. ಬಿಜೆಪಿ ಸರಕಾರ ಬಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ನಾನು ಮುಖ್ಯಮಂತ್ರಿಯಾಗುವೆ ಎಂದು. ಆದರೆ, ಸಿದ್ದರಾಮಯ್ಯ ಅವರ ಕನಸು ಕನಸಾಗಿ ಉಳಿಯಲಿದೆ ಎಂದು ವ್ಯಂಗ್ಯವಾಡಿದರು.











Click it and Unblock the Notifications