ನಕ್ಸಲರಿಂದ 20 ಪೊಲೀಸರ ಭೀಕರ ಹತ್ಯೆ
ಕೊಲ್ಕತ್ತಾ,
ಫೆ. 16 : ಪಶ್ಚಿಮ ಬಂಗಾಲದ ಮಿಡ್ನಾಪುರ ಜಿಲ್ಲೆಯ ಸಿಯಾಲ್ದಾದಲ್ಲಿ ನಕ್ಸಲರು ಆರೆ ಸೇನಾಪಡೆಯಲ್ಲಿ ಶಿಬಿರದ ಮೇಲೆ ನಡೆಸಿದ ದಾಳಿಯಲ್ಲಿ ಕನಿಷ್ಠ 20 ಯೋಧರು ಬಲಿಯಾಗಿದ್ದಾರೆ. id="toptextpromo">ಸೋಮವಾರ
ಸಂಜೆ ನಡೆದ ದಾಳಿಗೆ ಈಸ್ಟರ್ನ್ ಫ್ರಾಂಟಿಯರ್ ರೈಪಲ್ಸ್ ಪಡೆಯ ಯೋಧರು ಗುರಿಯಾಗಿದ್ದಾರೆ. ಈ ದಾಳಿಯಲ್ಲಿ ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. 25 ಬೈಕು ಮತ್ತು ನಾಲ್ಕು ದ್ವಿಚಕ್ರ ವಾಹನಗಳಲ್ಲಿ ಆಗಮಿಸಿದ ನಕ್ಸಲರು ಅರೆ ಸೇನಾಪಡೆಯ ಶಿಬಿರದ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದರು. ನೆಲಬಾಂಬ್ ಗಳನ್ನೂ ಸ್ಫೋಟಿಸಿದ ಬಳಿಕ ಶಿಬಿರಕ್ಕೆ ಬೆಂಕಿ ಹಚ್ಚಿದರು ಎಂದು ಜಿಲ್ಲಾಧಿಕಾರಿ ಎನ್ ಎಸ್ ನಿಗಂ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಈ
ದಾಳಿಯಲ್ಲಿ ವೇಳೆ 51 ಯೋಧರಿದ್ದರು. ನಕ್ಸಲರು ಏಕಾಏಕಿ ದಾಳಿ ನಡೆಸಿದ ಸಂದರ್ಭದಲ್ಲಿ ಶಿಬಿರದಲ್ಲಿ ಯೋಧರು ಅಡುಗೆ ಮನೆಯಲ್ಲಿ ಆಹಾರ ಸಿದ್ಧಪಡಿಸುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.











Click it and Unblock the Notifications