ಟೆಕ್ಕಿಗಳ ದಾಂಪತ್ಯಕ್ಕೆ ಕುತ್ತಾದ ತತ್ತಿ..!

ಮೊಟ್ಟೆ ತಿನ್ನಲು ವಿರೋಧಿಸುತ್ತಿರುವ ಅತ್ತೆ, ಈ ವಿಷಯದಲ್ಲಿ ತಾಯಿ ಪರ ವಕಾಲತ್ತು ವಹಿಸಿರುವ ಪತಿ ಹಾಗೂ ಚಿಕ್ಕಪುಟ್ಟ ವಿಷಯಗಳಿಂದ ಬೇಸತ್ತು ಪತಿಯನ್ನೇ ತೊರೆಯಲು ತೀರ್ಮಾನಿಸಿರುವ ಪತ್ನಿ. ಆಕೆಯೂ ಕೂಡಾ ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇಂತಹ ಸಮಸ್ಯೆ ಉದ್ಭವಿಸಿರುವ ಉನ್ನತ ಶಿಕ್ಷಣ ಹೊಂದಿರುವ ಸಾಫ್ಟ್ ವೇರ್ ದಂಪತಿಗಳಲ್ಲಿ ಎನ್ನುವುದು ವಿಶೇಷವಾಗಿದೆ.
ಪತಿ, ಪತ್ನಿ ಇಬ್ಬರೂ ಬ್ರಾಹ್ಮಣರು. ಇಬ್ಬರೂ ಜಗತ್ತಿನ ಬಗ್ಗೆ ಸ್ಪಷ್ಟ ಅರಿವುಳ್ಳವರು. ನಗರದ ಪ್ರತಿಷ್ಠಿತ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಆರು ತಿಂಗಳ ಹಿಂದೆಯಷ್ಟೇ ಇವರ ವಿವಾಹ ನೆರವೇರಿದೆ. ಮಧುಚಂದ್ರಕ್ಕೆ ಸಿಂಗಾಪುರಕ್ಕೆ ತೆರಳಿದ್ದ ಈ ದಂಪತಿಗಳು ಅಲ್ಲಿಯೇ ಜಗಳ ಮಾಡಿಕೊಂಡಿದ್ದಾರೆ. ಉನ್ನತ ಶಿಕ್ಷಣಕ್ಕಾಗಿ ಅಮೆರಿಕಾದಲ್ಲಿ ನೆಲೆಸಿದ್ದ ಪತ್ನಿ ಅಲ್ಲಿ ಸಂಸ್ಕೃತಿ ಹಾಗೂ ಉಡುಗೆ ತೊಡುಗೆಗಳಿಗೆ ಒಗ್ಗಿಕೊಂಡಿದ್ದಾರೆ. ಪತ್ನಿ ಮಿನಿ ಸ್ಕರ್ಟ್ ಗಳನ್ನು ತೊಡುವುದು ಪತಿಗೆ ಇಷ್ಟವಾಗಲಿಲ್ಲ. ಸಾಲದೆಂಬಂತೆ ಮಂಗಳಸೂತ್ರವನ್ನೂ ಆಕೆ ತೆಗೆದಿಡುವುದು ಪತಿಗೆ ನುಂಗಲಾರದ ತುತ್ತಾಯಿತು. ಅಲ್ಲಿಂದಲೇ ಶುರುವಾದ ಕೌಟುಂಬಿಕ ವಿರಸ ವಿಚ್ಛೇದನ ಹಂತಕ್ಕೆ ಬಂತು ತಲುಪಿದೆ.
ಇದರ ಜೊತೆಗೆ ಪತಿಯದು ಸಂಪ್ರದಾಯಸ್ಥ ಕುಟುಂಬ. ಮನೆಯಲ್ಲಿ ನಿತ್ಯವೂ ಸೊಸೆ ಅಮ್ಲೇಟ್ ಮಾಡಿಕೊಂಡು ತಿನ್ನುವುದು ಅತ್ತೆಗೆ ಅಪಥ್ಯವಾಯಿತು. ಇದರಿಂದ ಮನೆ ಕುರುಕ್ಷೇತ್ರವಾಯಿತು. ಕೊನೆಯದಾಗಿ ಪತ್ನಿಗೆ ವಿಚ್ಛೇದನ ನೀಡಲು ಪತಿ ಮುಂದಾಗಿದ್ದಾರೆ. ಇದೆಲ್ಲದರ ಜೊತೆಗೆ ಪತಿ ಸಲ್ಲಿಸಿದ ಅರ್ಜಿಯಲ್ಲಿ ಪತ್ನಿಯ ನಡತೆ ಸರಿಯಿಲ್ಲ. ಆಕೆಗೆ ಪರಪುರಷನೊಂದಿಗೆ ಸಂಬಂಧವಿದೆ. ಶಾಂಪಿಂಗ್ ಗೆ ತೆರೆಳಿದರೆ ವಿಪರೀತ ಖರ್ಚು ಮಾಡುತ್ತಾಳೆ ಇತ್ಯಾದಿ ಕಾರಣ ನೀಡಿ ವಿಚ್ಛೇದನಕ್ಕೆ ಕೋರಿದ್ದಾರೆ. ಇದು ಉನ್ನತ ಶಿಕ್ಷಣ ಹೊಂದಿದ ಹಾಗೂ ಮೇಲ್ಮಧ್ಯಮ ವರ್ಗದ ಕುಟುಂಬದಲ್ಲಿ ನಡೆದಿರುವ ಘಟನೆಯಾಗಿದೆ.












Click it and Unblock the Notifications