ಒಂಬತ್ತು ಜನರನ್ನು ಬಲಿ ತೆಗೆದುಕೊಂಡ ಲಾರಿ
ಬಿಜಾಪುರ,
ಫೆ. 10 : ಜಿಲ್ಲೆಯ ಇಂಡಿಯ ತಾಲೂಕಿನ ಏಳಗಿ ಗ್ರಾಮದಲ್ಲಿ ನಿಯಂತ್ರಣ ತಪ್ಪಿ ರಸ್ತೆ ಮೇಲೆ ನಿಂತಿದ್ದ ಜನರ ಮೇಲೆ ಹರಿದು ಪಲ್ಟಿಯಾದ ಪರಿಣಾಮ ಸ್ಥಳದಲ್ಲೇ 8 ಜನ ಸೇರಿ ಒಟ್ಟು 9 ಜನ ಸಾವಿಗೀಡಾಗಿದ್ದಾರೆ ಮತ್ತು 22 ಜನ ತೀವ್ರವಾಗಿ ಗಾಯಗೊಂಡಿದ್ದಾರೆ. id="toptextpromo">ಕಬ್ಬಿನ
ಕಟಾವನ್ನು ಸಾಗಿಸುತ್ತಿದ್ದ ಲಾರಿ ಚಾಲಕನ ಅಜಾಗರೂಕತೆಯಿಂದ ಬಸ್ಸಿಗಾಗಿ ಕಾಯುತ್ತಿದ್ದ ಏಳಗಿ ಗ್ರಾಮದ ಜನರ ಮೇಲೆ ಹರಿದಿದೆ. ನಂತರ ಪಲ್ಟಿ ಹೊಡೆದಿದ್ದರಿಂದ ಲಾರಿಯಲ್ಲಿದ್ದವರು ಕೂಡ ಮೃತರಾಗಿದ್ದಾರೆ. ಲಾರಿಯಲ್ಲಿದ್ದ ಕಾರ್ಮಿಕರು ಮಹಾರಾಷ್ಟ್ರಕ್ಕೆ ಸೇರಿದವರೆಂದು ತಿಳಿದುಬಂದಿದೆ. id='are-slot-1' class='oiad oi-axt oiadv'> id='top-searched-articles'>ಸತ್ತವರಲ್ಲಿ
ಇಬ್ಬರು ಹಸುಳೆ ಮತ್ತು ಓರ್ವ ಮಹಿಳೆಯಿದ್ದಾರೆ. ಮಹಿಳೆಯ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತರಾಗಿದ್ದಾರೆ. ಗಾಯಗೊಂಡ 22 ಜನರನ್ನು ಜಿಲ್ಲಾಆಸ್ಪತ್ರೆಗೆ ಸಾಗಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.











Click it and Unblock the Notifications