ಎರಡನೇ ಟೆಸ್ಟ್ ಗೆ ಮಿಥುನ್ ಗೆ ಕೊಕ್

India shuffle pack for second Test
ಮುಂಬೈ, ಫೆ. 10 : ಕಾಟಾಚಾರಕ್ಕೆ ಮೊದಲನೇ ಟೆಸ್ಟ್ ಗೆ ತಂಡಕ್ಕೆ ಆಯ್ಕೆ ಮಾಡಿ ಮೈದಾನಕ್ಕಿಳಿಸದೆ ಎರಡನೇ ಟೆಸ್ಟ್ ಗೆ ಕರ್ನಾಟಕದ ಉದಯೋನ್ಮುಖ ವೇಗದ ಬೌಲರ್ ಅಭಿಮನ್ಯು ಮಿಥುನ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ದುಲೀಪ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆಂದು ತಮಿಳುನಾಡಿನ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರಿಗೆ ಮತ್ತೊಮ್ಮೆ ತಂಡದಲ್ಲಿ ಮಣೆಹಾಕಿ, ಕೃಷ್ಣಮಾಚಾರಿ ಶ್ರೀಕಾಂತ್ ನೇತೃತ್ವದ ರಾಷ್ಟ್ರೀಯ ಆಯ್ಕೆ ಮಂಡಳಿ ತಂಡವನ್ನು ಪ್ರಕಟಿಸಿದೆ.

ಸ್ನಾಯು ಸೆಳೆತದಿಂದ ಚೇತರಿಸಿಕೊಂಡಿರುವ ಕೇರಳದ ವೇಗಿ ಶ್ರೀಶಾಂತ್ ಮತ್ತೆ ತಂಡಕ್ಕೆ ಆಯ್ಕೆಯಾಗಿದ್ದಾರೆ. ಸುರೇಶ ರೈನಾಗೆ ಇದೇ ಮೊದಲ ಬಾರಿಗೆ ಟೆಸ್ಟ್ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಬೆರಳಿನ ಗಾಯದ ಸಮಸ್ಯೆಯಿಂದ ದೂರ ಉಳಿದಿದ್ದ ಲಕ್ಷ್ಮಣ್ ಬಹುತೇಕ ಚೇತರಿಸಿಕೊಂಡಿದ್ದು ಎರಡನೇ ಟೆಸ್ಟ್ ನಲ್ಲಿ ಆಡುವ ಸಾಧ್ಯತೆಯಿದೆ. ಮಿಥುನ್ ಜೊತೆ ಉತ್ತರಪ್ರದೇಶದ ಸುದೀಪ್ ತ್ಯಾಗಿ ಮತ್ತು ಬಂಗಾಳದ ವೃಧಿಮಾನ್ ಸಹಾರರನ್ನು ಕೂಡ ಕೈ ಬಿಡಲಾಗಿದೆ.

ಪ್ರಥಮ ಟೆಸ್ಟ್ ನಲ್ಲಿ ಆಡಿದ ಬದರೀನಾಥ್ ( 56 ,6 ), ಮುರಳಿ ವಿಜಯ್ (4 ,32 ) ಮತ್ತು ವೃಧಿಮಾನ್ ಸಹಾ (0 ,36 ) ಕಳಪೆ ಪ್ರದರ್ಶನ ನೀಡಿದ್ದರೂ ಸಹಾ ಅವರನ್ನು ಮಾತ್ರ ತಂಡದಿಂದ ಕೈಬಿಟ್ಟು ಬದರೀನಾಥ್ ಮತ್ತು ಮುರಳಿ ವಿಜಯ್ ಗೆ ತಂಡದಲ್ಲಿ ಮತ್ತೆ ಸ್ಥಾನ ಕಲ್ಪಿಸಲಾಗಿದೆ. ಇತ್ತ ರಾಜ್ಯದ ಮಿಥುನ್ ಗೆ ಅವಕಾಶ ನೀಡದೇ ತಂಡದಿಂದ ಕೈಬಿಟ್ಟು ರಾಜ್ಯದ ಆಟಗಾರರರನ್ನು ಮತ್ತೊಮ್ಮೆ ಆಯ್ಕೆ ಮಂಡಳಿ ಕಡೆಗಣಿಸಿದೆ.

ತಂಡ ಈ ರೀತಿಯಿದೆ : ಮಹೇಂದ್ರ ಸಿಂಗ್ ಧೋನಿ, ವೀರೇಂದ್ರ ಸೆಹವಾಗ್, ಗೌತಮ್ ಗಂಭೀರ್, ಸಚಿನ್ ತೆಂಡೂಲ್ಕರ್, ಮುರಳಿ ವಿಜಯ್, ಲಕ್ಷ್ಮಣ್, ಬದರಿನಾಥ್, ಹರಭಜನ್, ಅಮಿತ್ ಮಿಶ್ರಾ, ಜಹೀರ್ ಖಾನ್, ಶ್ರೀಶಾಂತ್, ಇಶಾಂತ್ ಶರ್ಮಾ, ಪ್ರಗ್ಯಾನ್ ಓಜಾ, ದಿನೇಶ್ ಕಾರ್ತಿಕ್ ಮತ್ತು ಸುರೇಶ ರೈನಾ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+