ಮತಾಂತರ ನಿಷೇಧ ಕಾಯ್ದೆಗೆ ಮೋಟಮ್ಮ ವಿರೋಧ
ನವದೆಹಲಿ,
ಫೆ. 5:ಮತಾಂತರ ನಿಷೇಧ ಕಾಯಿದೆಗೆ ತಮ್ಮ ವಿರೋಧವಿದೆ. ಈ ಕಾಯಿದೆ ಮೂಲಕ ವ್ಯಕ್ತಿ ಸ್ವಾತಂತ್ಯಕ್ಕೆ ಧಕ್ಕೆಯಾಗಬಾರದು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕಿ ಮೋಟಮ್ಮ ಹೇಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲು ಹೊಸದಿಲ್ಲಿಗೆ ಆಗಮಿಸಿದ ಅವರು, ಮಾಧ್ಯಮ ಪ್ರತಿನಿಧಿಗಳೊಂದಿಗೆ ಶುಕ್ರವಾರ ಮಾತನಾಡಿದರು. id="toptextpromo">ನ್ಯಾ.
ಸೋಮಶೇಖರ ಆಯೋಗದ ವರದಿಯಿಂದ ಚರ್ಚ್ ದಾಳಿ ಹಿಂದೆ ಯಾರಿದ್ದಾರೆ ಎಂಬುದು ಬಹಿರಂಗಗೊಂಡಿದೆ. ಅದರ ಆಧಾರದ ಮೇಲೆ ಮುಖ್ಯಮಂತ್ರಿ ಕ್ರಮ ಕೈಗೊಳ್ಳಬೇಕು. ಕೇವಲ ಮಾತಿನಲ್ಲಿ ಚರ್ಚ್ ದಾಳಿ ಮಾಡಿದವರ ಕೈ ಕಡಿಯುವೆ ಎಂದು ಹೇಳಿದರೆ ಸಾಲದು. ಅದನ್ನು ಮಾಡಿ ತೋರಿಸಲಿ ಎಂದು ಸವಾಲೆಸೆದರು. id='are-slot-1' class='oiad oi-axt oiadv'> id='top-searched-articles'>ಬಿಜೆಪಿ
ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ರಾಜ್ಯಪಾಲರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ರಾಜ್ಯಪಾಲರು ಕಾನೂನು ಅನುಸರಿಸಿ ಸೋಮಣ್ಣ ಅವರ ಹೆಸರನ್ನು ತಿರಸ್ಕರಿಸಿದ್ದಾರೆ. ಹಂಸರಾಜ್ ಭಾರದ್ವಾಜ್ ಅವರು ದೇಶದ ಕಾನೂನು ಸಚಿವರಾಗಿದ್ದವರು. ವೃತ್ತಿಯಲ್ಲೂ ನ್ಯಾಯವಾದಿ. ಅವರು ಕಾನೂನು ಬಲ್ಲರು. ಅಂತಹವರ ನಿರ್ಧಾರದ ಬಗ್ಗೆ ಗೌರವಯುತವಾಗಿ ಮಾತನಾಡಬೇಕು ಎಂಬ ಸಾಮಾನ್ಯ ಜ್ಞಾನ ಕೂಡ ಈಶ್ವರಪ್ಪ ಅವರಿಗೆ ಇಲ್ಲದಿರುವುದು ಬೇಸರ ಉಂಟು ಮಾಡಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.











Click it and Unblock the Notifications