ಬೀದಿ ಭಾಷೆ ಮತ್ತೆ ಪ್ರಯೋಗಿಸಿದ ದೇವೇಗೌಡರು

ಅವನೊಬ್ಬ 'ಬ್ಲಡಿ ಬಾಸ್ಟರ್ಡ್ ಅಡ್ವೋಕೇಟ್ ಜನರಲ್' ಎಂದು ಆರೋಪಿಸಿದವರು ದೇಶದ ಹಿರಿಯ ಮುತ್ಸದ್ಧಿ, ಮಾಜಿ ಪ್ರಧಾನಿ, ರಾಜ್ಯದ ಮಾಜಿ ಮುಖ್ಯಮಂತ್ರಿ, ಜೆ ಡಿ ಎಸ್ ವರಿಷ್ಠ ಎಚ್ ಡಿ ದೇವೇಗೌಡ.
ಜೆಡಿಎಸ್ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಾ ದೇವೇಗೌಡರು, ಆ ಬಿಜೆಪಿಯವರು ರಾಮನ ಹೆಸರಿನಲ್ಲಿ ಇಟ್ಟಿಗೆ ತೋರಿಸಿ ಜನರನ್ನು ಮರುಳು ಮಾಡಿದರು. ಹೋಗಲಿ ದೇವಾಲಯ ಕಟ್ಟಿದ್ರಾ, ಇಲ್ಲಾ ರಾಮನಿಗೆ ಟೋಪಿ ಹಾಕಿದರು. ಮಂದಿರ ನಿರ್ಮಾಣಕ್ಕೆ ಬಂದ ಇಟ್ಟಿಗೆಯನ್ನು ಮಾರಿ ಹಣ ಲೂಟಿ ಮಾಡಿದರು. ರಾಮನ ಕಥೆ ಮುಗಿಸಿ ಈಗ ಶ್ರೀ ಕೃಷ್ಣ ದೇವರಾಯರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಹೊರಟಿದ್ದಾರೆಂದು ವ್ಯಂಗ್ಯವಾಡಿದ್ದಾರೆ.
ರೈತರು ಭೂಮಿ ಕಳೆದುಕೊಂಡು ಕಂಗಾಲಾಗಿದ್ದರೆ ಈ ಯಡಿಯುರಪ್ಪನವರು ಮಠಗಳಿಗೆ ನೀಡುವ ಅನುದಾನಕ್ಕೆ ಏನು ಕೊರತೆ ಮಾಡಿಲ್ಲ. ಮಠಾಧೀಶರಿಗೆ ರೈತರಿಗೆ ಸಾಂತ್ವನ ಹೇಳಬೇಕೆಂದು ಅನಿಸುವುದಿಲ್ಲ. ಮದರ್ ತೆರೇಸಾ, ಕ್ರಿಸ್ತನಂತಾ ಸೇವಾ ಮಾನವೀಯ ಮೌಲ್ಯಗಳ ಮನೋಭಾವ ಈ ಮಠಧೀಶರಿಗೆ ಎಲ್ಲಿಂದ ಬರಬೇಕು ಎಂದು ದೇವೇಗೌಡರು ಕಿಡಿಕಾರಿದ್ದಾರೆ.












Click it and Unblock the Notifications