ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಲಿ ಬಂತು ಹುಲಿ ಲೆಕ್ಕ ಹಾಕಿ ಬೇಗ!

By Mahesh
|
Google Oneindia Kannada News

Tiger Census is completed
ಮಡಿಕೇರಿ, ಫೆ. 4 : ರಾಜ್ಯದ ರಾಷ್ಟ್ರೀಯ ಉದ್ಯಾನವನಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ಹುಲಿಗಣತಿ ಕಾರ್ಯ ಪೂರ್ಣಗೊಂಡಿದೆ. ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ(ನಾಗರಹೊಳೆ)ದಲ್ಲಿ ಕೊನೆ ಹಂತದ ಗಣತಿ ಕಾರ್ಯವನ್ನು ಮಾಡಲಾಯಿತು.

ಜನವರಿಯಿಂದ ಹುಲಿಜಾಡು ಹುಡುಕಿಕೊಂಡು ಹೊರಟ ಎರಡು ತಂಡಗಳು ಸುಮಾರು 643 ಕಿ.ಮೀಗಳಷ್ಟು ಅರಣ್ಯ ಪ್ರದೇಶವನ್ನು ಕ್ರಮಿಸಿದರು. ಸುಮಾರು 170 ಕ್ಕೂ ಹೆಚ್ಚು ಪರಿಸರ ಪ್ರೇಮಿ ಸದಸ್ಯರುಗಳು ಸ್ವಯಂಪ್ರೇರಿತರಾಗಿ ಗಣತಿ ಕಾರ್ಯದಲ್ಲಿ ಪಾಲ್ಗೊಂಡಿದ್ದು ವಿಶೇಷ. ಕೆಲವರು ಮೊದಲ ಬಾರಿಗೆ ನೈಜವಾದ ಹುಲಿ ನೋಡಿ ಖುಷಿಪಟ್ಟರೆ ಮತ್ತೆ ಕೆಲವರು ಹುಲಿ ಹೆಜ್ಜೆ ನೋಡಿ ತೃಪ್ತಿ ಹೊಂದಿದರು. ಹುಣಸೂರು ಅರಣ್ಯ ವಿಭಾಗದ ಅಧಿಕಾರಿ ವಿಜಯ್ ರಂಜನ್ ಸಿಂಗ್ ಅವರ ನೇತೃತ್ವದಲ್ಲಿ ನಾಗರಹೊಳೆಯಲ್ಲಿ ಗಣತಿ ಕಾರ್ಯ ನಡೆಸಲಾಯಿತು.

ಮನುಷ್ಯರ ವಾಸನೆ ಅರಿತ ಹುಲಿಗಳು ತಮ್ಮ ಪಥ ಬದಲಿಸಿ, ತಂಡಕ್ಕೆ ಸಾಕಷ್ಟು ಬೆವರಿಳಿಸಿದ್ದಂತೂ ಸತ್ಯ. ಹುಲಿ ಗಣತಿ ಜೊತೆಗೆ ಅಕರ್ಷಕ ಗಿಡ ಮರ, ಪಕ್ಷಿ ಪ್ರಾಣಿಗಳ ಬಗ್ಗೆ ಕೂಡ ಮಾಹಿತಿ ಸಂಗ್ರಹ ಮಾಡಲಾಯಿತು. ಲಭ್ಯ ಮಾಹಿತಿಯನ್ನು ದಾಂಡೇಲಿಯ ಅರಣ್ಯ ಇಲಾಖೆಗೆ ನೀಡಲಾಗುತ್ತದೆ. ರಾಜ್ಯದಲ್ಲಿರುವ ಹುಲಿ ಸಂತತಿಯ ನಿಖರ ಅಂಕಿ ಅಂಶ ತಿಳಿಯಲು ಇನ್ನು ತಿಂಗಳಾದರೂ ಕಾಯಬೇಕು. ಸಂತಸದ ಸಂಗತಿಯೆಂದರೆ ಕಳೆದ ಬಾರಿಯ ಗಣತಿಗೆ ಹೋಲಿಸಿದರೆ ನಾಗರಹೊಳೆಯಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿರುವುದು ಕಂಡು ಬಂದಿದೆ. ಕಳೆದ ವರ್ಷದ ಗಣತಿಯಲ್ಲಿ 65ಹುಲಿಗಳು ಮಾತ್ರ ಕಾಣಿಸಿದ್ದವು.

ಅಂದಾಜು ಎಷ್ಟು ಹುಲಿಗಳಿವೆ?:
ಮೂರು ವರ್ಷದ ಕೆಳಗೆ ನಡೆಸಲಾದ ಗಣತಿಯ ಪ್ರಕಾರ ಭಾರತದಲ್ಲಿ ಸುಮಾರು 1,500 ರಿಂದ 1,657 ಹುಲಿಗಳು ಕಂಡುಬಂದಿದ್ದವು.ವಿಶ್ವದೆಲ್ಲೆಡೆ ಸುತ್ತಾಟ ನಡೆಸಿ ಶೋಧಿಸಿದರೂ, ಬೆಂಗಾಲದ 'ರಾಯಲ್' ಹುಲಿ, ಪಟ್ಟೆ ಹುಲಿ, ಬಿಳಿ ಹುಲಿ ಎಲ್ಲವನ್ನು ಒಟ್ಟುಗೂಡಿಸಿದರೂ ನಿಮ್ಮ ಕಣ್ಣಿಗೆ ಕಾಣಸಿಗುವುದು ಕೇವಲ 3,500 ಹುಲಿಗಳು ಮಾತ್ರಎಂದು ವನ್ಯಜೀವಿ ತಜ್ಞರು ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X