ಬೆಂಗಳೂರಿಗೆ ಆರೆಸ್ಸೆಸ್ ಮುಖಂಡರ ದಂಡು

Mohan Bhagawat
ಬೆಂಗಳೂರು, ಫೆ. 3: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂಗಸಂಸ್ಥೆಯಾದ ರಾಷ್ಟ್ರೀಯ ಸೇವಾ ಭಾರತಿಯ ಆಶ್ರಯದಲ್ಲಿ ಮೂರು ದಿವಸಗಳ ರಾಷ್ಟ್ರೀಯ ಸೇವಾ ಸಂಗಮ ಶಿಬಿರ ಬೆಂಗಳೂರಿನಲ್ಲಿ ಫೆ 6 ರಿಂದ 8 ರವರೆಗೆ ನಡೆಯಲಿದೆ.

ಸಮಾನ ಮನಸ್ಕ ಸೇವಾಸಂಸ್ಥೆಗಳ ಈ ಸಮಾವೇಶದಲ್ಲಿ ಸುಮಾರು 700 ಸಂಸ್ಥೆಗಳಿಂದ ಆಗಮಿಸುವ 1500 ಕ್ಕೂ ಹೆಚ್ಚು ಕಾರ್ಯಕರ್ತರು ಪರಸ್ಪರ ವಿಚಾರ ವಿನಿಮಯ ಮತ್ತು ಕಾರ್ಯಾವಲೋಕನ ಮಾಡಲಿದ್ದಾರೆ ಎಂದು ಸೇವಾ ಸಂಗಮದ ಅಧ್ಯಕ್ಷ ಸೀತಾರಾಮ ಕೆದಿಲಾಯ ಮಂಗಳವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಯಲಹಂಕದ ನಿಟ್ಟೆ ಮೀನಾಕ್ಷಿ ಕಾಲೇಜಿನಲ್ಲಿ ನಡೆಯಲಿರುವ ಸೇವಾ ಸಂಗಮದ ಶಿಬಿರದಲ್ಲಿ ಸಮಾಜಕಾರ್ಯಕ್ಕಾಗಿ ತಮ್ಮ ಜೀವನವನ್ನುಮುಡಿಪಾಗಿಟ್ಟಿರುವ ನಾಡಿನ ಪ್ರಮುಖರು ಹಾಗೂ ಆರ್.ಎಸ್.ಎಸ್.ನ ಹಿರಿಯ ಅಧಿಕಾರಿಗಳು ಸ್ವಂಸೇವಕರಿಗೆ ಮಾರ್ಗದರ್ಶನ ಮಾಡಲಿದ್ದಾರೆ.

ಸಾಮಾಜಿಕ ಪರಿವರ್ತನೆಯ ಮೂಲಕ ರಾಷ್ಟ್ರ ಪುನರ್ನಿರ್ಮಾಣ ಎನ್ನುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಿದ್ಧಾಂತದಿಂದ ಪ್ರೇರಣೆ ಪಡೆದು ಸಾವಿರಾರು ಸ್ವಯಂಸೇವಕರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸುಮಾರು 1,57,000 ದಷ್ಟು ಸೇವಾ ಚಟುವಟಿಕೆಗಳ
ಮೂಲಕ ಸಮಾಜೋಪಯೋಗೀ ಫಲಿತಾಂಶಗಳನ್ನೂ ಈ ಕಾರ್ಯಕರ್ತರು ನೀಡುತ್ತಿದ್ದಾರೆ ಎಂದು ಕೆದಿಲಾಯ ವಿವರಿಸಿದರು.

ಕಾರ್ಯಕ್ರಮದ ವಿವರಗಳು : ಫೆಬ್ರವರಿ 6 ಶನಿವಾರ ಬೆಳಗ್ಗೆ 9.30 ಗೆ ಸೇವಾಕಾರ್ಯಗಳ ಪ್ರದರ್ಶಿನಿಯ ಉದ್ಘಾಟನೆ. ಬೆಳಗ್ಗೆ 11 ಗಂಟೆಗೆ ಸೇವಾಸಂಗಮ 2010 ರ ಉದ್ಘಾಟನೆ ಶ್ರೀ ರವಿಶಂಕರ್, ಸ್ಥಾಪಕರು ದಿ ಆರ್ಟ್ ಆಫ್ ಲಿವಿಂಗ್ ಅವರಿಂದ. ಭಾಷಣ : ಕೆ.ಎಸ್. ಸುದರ್ಶನ್, ಭೂತಪೂರ್ವ ಸರಸಂಘಚಾಲಕರು, ಆರ್.ಎಸ್.ಎಸ್.

ಫೆಬ್ರವರಿ 7 ಭಾನುವಾರ ಬೆಳಗ್ಗೆ 11 ಗಂಟೆಗೆ ಸ್ವಯಂಸೇವಾ ಸಂಸ್ಥೆಗಳ ಮಿಲನ. ಸಂಜೆ 5.30 ಕ್ಕೆ ಸಾರ್ವಜನಿಕ ಸಮಾರಂಭ. ಭಾಷಣ : ಮೋಹನ್ ಭಾಗವತ್, ಸರಸಂಘಚಾಲಕರು, ಆರ್.ಎಸ್.ಎಸ್.

ಫೆಬ್ರವರಿ 8 ಸೋಮವಾರ ಸೇವಾಸಂಗಮದಲ್ಲಿ ಭಾಗವಹಿಸುವ ಆರ್.ಎಸ್.ಎಸ್.ನ ಹಿರಿಯರು: ಭಯ್ಯಾಜಿ ಜೋಶಿ, ಸರಕಾರ್ಯವಾಹರು. ದತ್ತಾತ್ರೇಯ ಹೊಸಬಾಳೆ, ಸಹ ಸರಕಾರ್ಯವಾಹರು, ಮದನದಾಸ ದೇವಿ, ಸೀತಾರಾಮ್ ಕೆದಿಲಾಯ ಮೊದಲಾದವರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+