ಬೆಳಗಾವಿ ಪ್ರಮಾದ ಉದ್ದೇಶಪೂರ್ವಕವಲ್ಲ

Vice President Hamid Ansari
ನವದೆಹಲಿ, ಫೆ.3 : 'ಬೆಳಗಾವಿ ಜಿಲ್ಲೆ, ಮಹಾರಾಷ್ಟ್ರ' ಎಂದು ಜಿಲ್ಲಾಧಿಕಾರಿಗೆ ಬರೆದ ಪತ್ರದಲ್ಲಿ ತಪ್ಪಾಗಿ ಉಲ್ಲೇಖಿಸಿರುವುದಕ್ಕೆ ಉಪ ರಾಷ್ಟ್ರಪತಿ ಕಚೇರಿ ವಿಷಾದ ವ್ಯಕ್ತ ಪಡಿಸಿದೆ. ಪತ್ರದಲ್ಲಿ ರಾಜ್ಯದ ಹೆಸರು ಕರ್ನಾಟಕ ಎಂದು ಇರಬೇಕಾದ ಸ್ಥಳದಲ್ಲಿ ಮಹಾರಾಷ್ಟ್ರ ಎಂದು ತಪ್ಪಾಗಿ ಉಲ್ಲೇಖಿಸಲಾಗಿದೆ. ಇದು ಉದ್ದೇಶಪೂರ್ವಕವಾಗಿ ನಡೆದ ಕೃತ್ಯವಲ್ಲ. ಈ ತಪ್ಪಿನ ಹಿಂದೆ ಯಾವುದೇ ದುರಾಲೋಚನೆ ಇಲ್ಲ. ಇದಕ್ಕಾಗಿ ವಿಷಾದ ವ್ಯಕ್ತ ಪಡಿಸುತ್ತಿದ್ದೇವೆ ಎಂದು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಉಪರಾಷ್ಟ್ರಪತಿಗಳ ಕಚೇರಿ ಸ್ಪಷ್ಟೀಕರಣ ನೀಡಿದೆ.

ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ವರ್ಷವಾಡದ ಮಸೀದಿ ಗಲ್ಲಿಯ ಶಾಹಿನ್ ರಫೀಕ್ ಎಂಬುವರು ಖಾನಾಪುರ ಪಟ್ಟಣ ಪಂಚಾಯತ್ ವಿರುದ್ಧ ಉಪ ರಾಷ್ಟ್ರಪತಿಯವರಿಗೆ ದೂರು ಸಲ್ಲಿಸಿದ್ದರು. ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಉಪ ರಾಷ್ಟ್ರಪತಿ ಕಚೇರಿಯಿಂದ ಬೆಳಗಾವಿ ಜಿಲ್ಲಾಧಿಕಾರಿಗೆ ಪತ್ರಬರೆಯಲಾಗಿತ್ತು. ಆ ಪತ್ರದಲ್ಲಿ 'ಬೆಳಗಾವಿ ಜಿಲ್ಲೆ, ಮಹಾರಾಷ್ಟ್ರ' ಎಂದು ತಪ್ಪಾಗಿ ಬರೆಯಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+