ಮಂಗಳೂರು ಚರ್ಚ್ ಮೇಲೆ ಕಲ್ಲು ತೂರಾಟ
ಮಂಗಳೂರು,
ಫೆ.1: ಮಂಗಳೂರಿನ ಸಂತೂರು ಪಾದುಕಾ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 17ರ ಬಳಿ ಇರುವ ಮಂಗಳೂರು ಬಿಷಪ್ ಧರ್ಮಪ್ರಾಂತಕ್ಕೆ ಒಳಪಟ್ಟ (ಕೆನರಾ ಆರ್ಗನೈಜೇಶನ್ ಫಾರ್ ಡೆವಲಪ್ ಮೆಂಟ್ ಅಂಡ್ ಪೀಸ್-ಸಿಓಡಿಪಿ) ಕ್ರೈಸ್ತ ಸಾಮಾಜಿಕ ಚಟುವಟಿಕೆ ಕೇಂದ್ರದ ಮೇಲೆ ಭಾನುವಾರ ಬೆಳಗ್ಗೆ ಕಲ್ಲು ತೂರಾಟ ನಡೆದಿದೆ. ಘಟನೆಯಲ್ಲಿ ಮೇರಿ ಮಾತೆಯ ಭಾವ ಚಿತ್ರಕ್ಕೆ ಅಳವಡಿಸಿದ್ದ ಗಾಜು ಪುಡಿಯಾಗಿದೆ. id="toptextpromo">ಸಿಓಡಿಪಿಯ
ಕಾರ್ಯದರ್ಶಿ ಫಾ.ಒನಿಲ್ ಡಿ"ಸೋಜಾ ಅವರು ದೂರು ನೀಡಿದ್ದು ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದು ಕಿಡಿಗೇಡಿಗಳ ಕೃತ್ಯ ಇರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸೆ.15ರಂದು ಕಿಡಿಗೇಡಿಗಳು ಈ ಕಟ್ಟಡದ ಮೇಲೆ ಕಲ್ಲು ತೂರಿದ್ದರು. ಇದೀಗ ಎರಡನೇ ಬಾರಿಗೆ ಕಟ್ಟಡದ ಮೇಲೆ ಕಲ್ಲೆಸೆಯಲಾಗಿದೆ ಎಂದು ಫಾ.ಒನಿಲ್ ಡಿ"ಸೋಜಾ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಈ
ದುಷ್ಕೃತ್ಯ ಎಸಗಿದವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಫಾ.ಒನಿಲ್ ಅವರು ಒತ್ತಾಯಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕದ್ರಿ ಪೊಲೀಸರು ಕಿಡಿಗೇಡಿಗಳ ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ.











Click it and Unblock the Notifications